Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ಪಡುಕೋಣೆ ರಮಾನಂದ ರಾಯರು
    Artist

    ವಿಶೇಷ ಲೇಖನ – ಪಡುಕೋಣೆ ರಮಾನಂದ ರಾಯರು

    December 30, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕರಾವಳಿಯ ಹಾಸ್ಯ ಲೇಖಕರೆಂದೇ ಪ್ರಸಿದ್ಧರಾದವರು ಪಡುಕೋಣೆ ರಮಾನಂದ ರಾಯರು. ಇವರು 1896ರ ಡಿಸೆಂಬರ್ 30ರಂದು ಉಡುಪಿ ಜಿಲ್ಲೆಯ ಪಡುಕೋಣೆಯಲ್ಲಿ ಜನಿಸಿದರು. ತಂದೆ ನರಸಿಂಗರಾಯರು, ತಾಯಿ ಚಂದ್ರಭಾಗಿ. ಇವರ ಆರಂಭದ ಶಿಕ್ಷಣವೆಲ್ಲವೂ ಮಂಗಳೂರಿನ ಶಾಲಾ ಕಾಲೇಜುಗಳಲ್ಲಿ. ವಿದ್ಯಾರ್ಥಿ ದೆಸೆಯಲ್ಲಿ ಸಾಹಿತ್ಯದ ಒಲವು ಅಧಿಕವಾಗಿತ್ತು. ಪಠ್ಯಪುಸ್ತಕದ ಭಾಷೆಗಿಂತ ಭಿನ್ನವಾದ ಭಾಷೆ ಇರುವ ಪಿ. ಜಿ. ವುಡ್ಹೌಸ್ ಅವರ ಪುಸ್ತಕಗಳು ಮತ್ತು ವಿಶ್ವದ ಅತ್ಯಂತ ಜನಪ್ರಿಯ ಹಾಸ್ಯಗಾರ, ಶಿಕ್ಷಣ ತಜ್ಞ ಮತ್ತು ಉಪನ್ಯಾಸಕರಾದ ಕೆನಡಾದ ಸ್ಟೀಫನ್ ಲೀಕಾಕ್ ಇವರ ಬರಹಗಳು ರಮಾನಂದರಿಗೆ ಅಚ್ಚುಮೆಚ್ಚಿನದಾಗಿದ್ದವು.
    ಇಂಟರ್ಮೀಡಿಯಟ್ ನಲ್ಲಿ ಓದುತ್ತಿರುವಾಗ ಸೀತಾ ಎಂಬ ಪ್ರತಿಭಾನ್ವಿತೆಯೊಂದಿಗೆ ವಿವಾಹವಾದ ಕಾರಣ ಇವರ ವಿದ್ಯಾಭ್ಯಾಸ ಅಲ್ಲಿಗೆ ಮೊಟಕುಗೊಂಡಿತು. ಮತ್ತೆ ವಿದ್ಯಾಭ್ಯಾಸವನ್ನು ಮುಂದುವರಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ಬಿ. ಎ., ಎಂ. ಎ. ಮತ್ತು ಎಲ್. ಟಿ. ಪದವಿಗಳನ್ನು ಪಡೆದರು. ರಸಾಯನ ಶಾಸ್ತ್ರದ ಅಧ್ಯಾಪಕರಾಗಿ ರಾಜಮಹೇಂದ್ರಿ, ತಲಚೇರಿ, ಪಾಲ್ಘಾಟ್ ಮತ್ತು ಈಗಿನ ಚೆನ್ನೈಗಳಲ್ಲಿ ಸೇವೆ ಸಲ್ಲಿಸಿದರು. ಮಂಗಳೂರಿನಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿ ನಿವೃತ್ತರಾದ ನಂತರ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು. ಇವರ ಐದು ಮಂದಿ ಮಕ್ಕಳಲ್ಲಿ ನಾಲ್ಕು ಮಂದಿ ಹೆಣ್ಣು ಮಕ್ಕಳು ಭರತನಾಟ್ಯ, ಚಿತ್ರಕಲೆ ಹಾಗೂ ಸಂಗೀತ ಕಲೆಯಲ್ಲಿ ಪ್ರಸಿದ್ಧರು.
    ನಾಟಕ ರಚನೆ, ಪಾತ್ರ ನಿರ್ವಹಣೆ ಮತ್ತು ಸಂಗೀತದಲ್ಲಿ ಇವರಿಗೆ ವಿಪರೀತ ಆಸಕ್ತಿ ಇತ್ತು. ಇವರು ಶಿವರಾಮ ಕಾರಂತರ ಸಿನೆಮಾದಲ್ಲೂ ಪಾತ್ರ ನಿರ್ವಹಿಸಿದ್ದು ಗಮನೀಯ. ಹಾಸ್ಯ ಕವಿತೆ ಪ್ರಸಂಗಗಳನ್ನು ರಚಿಸಿ ಪ್ರಕಟಿಸುವುದರೊಂದಿಗೆ ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಾಟಕಗಳನ್ನು ಬರೆದಿದ್ದಾರೆ. 1928ರಲ್ಲಿ ಇವರ ‘ಹುಚ್ಚು ಬೆಳದಿಂಗಳ ಹೂಬಾಣಗಳು’ ಎಂಬ ಪ್ರಸಿದ್ಧ ಹಾಸ್ಯ ಕವನ ಸಂಕಲನ ಲೋಕಾರ್ಪಣೆಗೊಂಡಿದೆ. ಖ್ಯಾತ ನಾಟಕಕಾರ ಚೆಕಾವ್ ಇವರ ‘ಚೆರಿ ಹಣ್ಣಿನ ತೋಟ’ ಮತ್ತು ರೆಮಾರ್ಕನ ‘ಪಶ್ಚಿಮ ರಣರಂಗದಲ್ಲಿ ಎಲ್ಲವೂ ಶಾಂತ’ ಎಂಬ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರದ್ದು. ಸಿ. ಕೆ. ವೆಂಕಟರಾಮಯ್ಯನವರ ‘ಮಂಡೋದರಿ’ ಮತ್ತು ವಿ. ಸಿ.ಯವರ ‘ಸೊಹ್ರಾಬ್ – ರುಸ್ತುಂ’ ಎಂಬ ನಾಟಕಗಳನ್ನು ರಂಗಕ್ಕೆ ತಂದ ಖ್ಯಾತಿ ಇವರಿಗೆ ಸಲ್ಲುತ್ತದೆ. ಮಂಗಳೂರು ಮತ್ತು ಪುತ್ತೂರುಗಳಲ್ಲಿ ರಂಗಭೂಮಿಯ ಬೆಳವಣಿಗೆಯಲ್ಲಿ ರಮಾನಂದ ಹಾಗೂ ಸೀತಾದೇವಿ ಪಡುಕೋಣೆಯವರ ಕೊಡುಗೆ ಅಪಾರವಾಗಿದೆ. ಸೀತಾದೇವಿಯವರು ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಬಳಿಕ ತಮ್ಮ ಸ್ವಸಾಮರ್ಥ್ಯದಿಂದ ಇಂಗ್ಲಿಷ್ ಮತ್ತು ಕನ್ನಡ ಭಾಷೆ ಕಲಿತು ತಾವೇ ರಚಿಸಿದ ಹಲವು ಕೃತಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಟಿ. ಪಿ. ಕೈಲಾಸಂ ಇವರ ‘ಹೋಂ ರೂಲ್’ ನಾಟಕವನ್ನು ಕರಾವಳಿಯ ರಂಗದ ಮೇಲೆ ತಂದ ಖ್ಯಾತಿ ರಮಾನಂದರಾಯರದ್ದು. ಮುಂದೆ ಅದನ್ನು ಅವರ ಪತ್ನಿ ಸೀತಾದೇವಿಯವರು ಅದೇ ಹೆಸರಿನಿಂದ ಕೊಂಕಣಿ ಭಾಷೆಗೆ ಅನುವಾದ ಮಾಡಿದರು.
    ಮಡಿವಂತಿಕೆಯ ಸಮಾಜದ ಆ ಕಾಲಘಟ್ಟದಲ್ಲಿಯೂ ಸೀತಾದೇವಿ ಮತ್ತು ರಮಾನಂದರಾಯರು ನಾಟಕದಲ್ಲಿ ಅಭಿನಯಿಸಿದ್ದು, ಅದು ಬಹು ಚರ್ಚೆಗೆ ಒಳಗಾಗಿ ಸುದ್ದಿಯಾಗಿತ್ತು.
    ಸಮಾನಂದರ ಮನೆಯ ಬಾಗಿಲು ಸಾಹಿತಿಗಳಿಗೆ ಸದಾ ತೆರೆದಿರುತಿತ್ತು. ಸಾಹಿತಿಗಳ ಸಂಗದಿಂದ ಮತ್ತು ಲೇಖಕ ಪತಿಯ ಪ್ರೋತ್ಸಾಹದಿಂದ ಸೀತಾದೇವಿ ತಾವೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತಾಯಿತು. ಜಿ. ಪಿ. ರಾಜರತ್ನಂ ಇವರು ರಮಾನಂದರಾಯರ ಮನೆಯಲ್ಲಿ ನಾಲ್ಕು ತಿಂಗಳು ಅತಿಥಿಯಾಗಿದ್ದು ‘ಬೌದ್ಧ ಧರ್ಮ’ ಎಂಬ ಗ್ರಂಥವನ್ನು ರಚಿಸಿದ್ದು ಸ್ಮರಣೀಯ.
    ರಮಾನಂದರ ಜನ್ಮ ಶತಾಬ್ದಿ ವರ್ಷದಲ್ಲಿ ಅವರ ಗೆಳೆಯರು ಮತ್ತು ಹಿತಚಿಂತಕರು ಸೇರಿ ‘ರಮಾನಂದ ನಮನ’ ಎಂಬ ಒಂದು ಕೃತಿಯನ್ನು ಹೊರ ತಂದದ್ದು ವಿಶೇಷ. ನಾಟಕ ರಚನೆಗಾರ, ಪಾತ್ರ ನಿರ್ವಹಣೆಗಾರ ಹಾಗೂ ಸಂಗೀತಾಸಕ್ತ ಹೇಗೆ ಎಲ್ಲಾ ವಿಷಯಗಳಲ್ಲೂ ಪ್ರಬುದ್ಧರಾದ ರಮಾನಂದ ಪಡುಕೋಣೆಯವರನ್ನು 13 ಫೆಬ್ರವರಿ 1983ರಲ್ಲಿ ನಾವು ಕಳಕೊಂಡೆವು.
    -ಅಕ್ಷರೀ

    Share. Facebook Twitter Pinterest LinkedIn Tumblr WhatsApp Email
    Previous Articleಬಿ. ಜಿ. ಎಂ. ಆರ್ಟ್ ಟ್ರಸ್ಟ್‌ ವತಿಯಿಂದ ಚಿತ್ರಕಲಾ ಸ್ಪರ್ಧೆ| ಜನವರಿ 05
    Next Article ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೇಶವ ಕನಿಲ ಆಯ್ಕೆ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.