ಬೆಂಗಳೂರು : ಕನ್ನಡ ಸಂಶೋಧನ ಅಕಾಡೆಮಿ (ನೋಂ.) ಇದರ ವತಿಯಿಂದ ‘ಆವಿಷ್ಕಾರ’ ಕನ್ನಡ ಸಂಶೋಧನೆಯ ವಿಧಿ-ವಿಧಾನಗಳು ಮತ್ತು ಹೊಸ ಸಾಧ್ಯತೆಗಳು ಬೃಹತ್ ಮುಕ್ತ ಆನ್ ಲೈನ್ ಕೋರ್ಸ್ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2025ರಂದು ಸಂಜೆ ಗಂಟೆ 5-45ಕ್ಕೆ ಆನ್ ಲೈನ್ ವೇದಿಕೆಯಲ್ಲಿ ಆಯೋಜಿಸಲಾಗಿದೆ.
‘ನಾಟಕ ಸಾಹಿತ್ಯದ ಸವಾಲುಗಳು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ ನಾಟಕಕಾರರು ಮತ್ತು ಸಹ ಪ್ರಾಧ್ಯಾಪಕರಾದ ಡಾ. ನಟರಾಜ ತಲಘಟ್ಟಪುರ ಮತ್ತು ‘ರಂಗಭೂಮಿ ಕ್ಷೇತ್ರದ ಸವಾಲುಗಳು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ ನಾಟಕಕಾರರು ಮತ್ತು ನಿವೃತ್ತ ಪ್ರಾಧ್ಯಾಪಕರಾದ ಡಾ. ನಾ. ದಾಮೋದರ ಶೆಟ್ಟಿ ಇವರುಗಳು ಉಪನ್ಯಾಸ ನೀಡಲಿದ್ದಾರೆ.