Subscribe to Updates

    Get the latest creative news from FooBar about art, design and business.

    What's Hot

    ಸುಳ್ಯದಲ್ಲಿ ಡಾ. ಪೂವಪ್ಪ ಕಣಿಯೂರು ಇವರ ಕೃತಿ ಬಿಡುಗಡೆ

    February 17, 2026

    ಡಾ. ಬಿ. ಜನಾರ್ದನ ಭಟ್ ಇವರ ‘ತುಳುನಾಡಿನ ಬೆರ್ಮರು’ ಹಾಗೂ ‘ಹೊಸಹೊಳಲು’ ಕೃತಿಗಳ ಲೋಕಾರ್ಪಣೆ

    February 17, 2026

    ಬೆಂಗಳೂರಿನ ವಾಡಿಯ ಸಭಾಂಗಣದಲ್ಲಿ ‘ಜ್ಞಾನ ದೇಗುಲ’ ನಾಟಕ ಪ್ರದರ್ಶನ | ಫೆಬ್ರವರಿ 20

    February 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಪನ್ಮೂಲ ವ್ಯಕ್ತಿ ಡಾ. ಸುರೇಶ ನೆಗಳಗುಳಿಯರಿಂದ ವಿದ್ಯಾರ್ಥಿಗಳಿಗಾಗಿ ‘ವಿಶೇಷ ಪ್ರೇರಣಾ ಕಾರ್ಯಾಗಾರ’
    Workshop

    ಸಂಪನ್ಮೂಲ ವ್ಯಕ್ತಿ ಡಾ. ಸುರೇಶ ನೆಗಳಗುಳಿಯರಿಂದ ವಿದ್ಯಾರ್ಥಿಗಳಿಗಾಗಿ ‘ವಿಶೇಷ ಪ್ರೇರಣಾ ಕಾರ್ಯಾಗಾರ’

    January 11, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ವಿಶೇಷ ಪ್ರೇರಣಾ ಕಾರ್ಯಾಗಾರ’ ನಡೆಯುತ್ತಿದ್ದು, ಡಾ. ಸುರೇಶ ನೆಗಳಗುಳಿಯವರು ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ನಡುಹಗಲ ಕಾರ್ಯಾಗಾರವನ್ನು ದಿನಾಂಕ 22-12-2023ರಂದು ನಡೆಸಿಕೊಟ್ಟರು.

    “ಸ್ನಾತಕೋತ್ತರ ಪದವಿ ಪಡೆಯಬೇಕಾದರೆ ಕೇವಲ ಪ್ರವೇಶ ಗಿಟ್ಟಿಸಿದರೆ ಸಾಲದು. ಪ್ರತ್ಯುತ್ಪನ್ನ ಮತಿ ಸಹಿತವಾದ ಸಾಧನೆ ಅಗತ್ಯ. ಗ್ರಂಥೋಕ್ತ ವಿಚಾರಗಳನ್ನು ದಾಖಲೀಕರಣ ಮಾಡಲು ಸರಿಯಾದ ಅನುಸಂಧಾನದ ಅಗತ್ಯವಿದೆ. ಆದ ಕಾರಣ ಯೋಗ್ಯ ಉಪನಿದೇಶಕನ ಜೊತೆಗೆ ಪೂರ್ಣ ಪ್ರಮಾಣದ ಕ್ರಮಬದ್ಧವಾದ ಅನುಸಂಧಾನ ಪ್ರಕ್ರಿಯೆ ಅಗತ್ಯ. ತೌಲನಾತ್ಮಕ ಅಧ್ಯಯನ, ವೈಜ್ಞಾನಿಕ ಸಲಕರಣೆಗಳಾದ ಸಿ‌.ಟಿ.ಸ್ಕಾನ್, ಕ್ಷ-ಕಿರಣ, ಲ್ಯಾಬೊರೇಟರಿ ಇತ್ಯಾದಿಗಳನ್ನು ಬಳಸಿ ಸತ್ಯಾನ್ವೇಷಣೆ ಮಾಡಬೇಕು. ಎಷ್ಟೋ ಉತ್ತಮ ಅಂಶಗಳು ಅಧ್ಯಯನದ ಕೊರತೆಯಿಂದ ಮಾಸಿ ಹೋಗಿವೆ. ಅಂಥವುಗಳ ಪುನರುಜ್ಜೀವನಕ್ಕೆ ಈ ರೀತಿಯ ಅಧ್ಯಯನ ಅಗತ್ಯ ಎನ್ನುತ್ತಾ ಹಲವಾರು ಪೂರಕ ಉದಾಹರಣೆಗಳನ್ನೂ ಸ್ವರಚಿತ ಮುಕ್ತಕ ಮಾಲೆಯನ್ನೂ ವಾಚಿಸಿದರು.

    ಕಾಲೇಜು ಪ್ರಾಚಾರ್ಯ ಡಾ. ಸಜೀತ್ ಎಂ. ಹಾಗೂ ಸ್ನಾತಕೋತ್ತರ ಡೀನ್ ಡಾ. ರವಿರಾಜ ಹೆಗ್ಡೆ ಸಹಿತ ಎಪ್ಪತ್ತು ಮಂದಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡರು. ಪ್ರಾಚಾರ್ಯರು ಪುಸ್ತಕ, ಹಾರ ಹಾಗೂ ಶಾಲು ಹೊದೆಸಿ ಸನ್ಮಾನ ಮಾಡುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕೆನರಾ ಕಾಲೇಜಿನಲ್ಲಿ ‘ನಾಟ್ಯ ಸಂಭ್ರಮ -2023’
    Next Article ಕಾಸರಗೋಡಿನಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ‘ಸಾಹಿತ್ಯ ಗಾನ ನೃತ್ಯ ವೈಭವ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಮಕ್ಕಳ ಬಹುಭಾಷಾ ಕವಿಗೋಷ್ಠಿ ಮತ್ತು ಕವಿತೆ ಹುಟ್ಟುವ ಗುಟ್ಟು ಕಾರ್ಯಾಗಾರ | ಫೆಬ್ರವರಿ 22

    February 16, 2026

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ‘ಗಾಯನ ಸಂಗೀತ ಕಾರ್ಯಾಗಾರ’ | ಫೆಬ್ರವರಿ 13, 14, 21 ಮತ್ತು 22

    February 11, 2026

    ಎನ್.ಐ.ಟಿ.ಕೆ.ಯಲ್ಲಿ ‘ವಿರಾಸತ್’ ಸಂಗೀತ, ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರ | ಫೆಬ್ರುವರಿ 4ರಿಂದ 8  

    February 3, 2026

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ‘ಗಾಯನ ಸಂಗೀತ ಕಾರ್ಯಾಗಾರ’ | ಜನವರಿ 24, 25, 31 ಮತ್ತು ಫೆಬ್ರುವರಿ 01

    January 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.