ಪುತ್ತೂರು : ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸೇವಾ ಸಂಘದ 56ನೇ ವಾರ್ಷಿಕೋತ್ಸವ ಮತ್ತು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ವರ್ಷಾಚರಣೆಯನ್ನು ವಿಶಿಷ್ಟವಾಗಿ ದಿನಾಂಕ 25 ಡಿಸೆಂಬರ್ 2024ರಂದು ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದ್ದು, ಇದರ ಪೂರ್ವ ಸಿದ್ಧತಾ ಸಭೆಯು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ದಿನಾಂಕ 14 ನವೆಂಬರ್ 2024ರಂದು ಜರಗಿತು. ಯಕ್ಷಗಾನ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದರು.
ತಾಳಮದ್ದಳೆಯಾಗಿ ಉಭಯಸಂಘದ ಸದಸ್ಯರಿಂದ ಋಷಿ ಪತ್ನಿಯರ ಸಂವಾದ ಸರಣಿ, ಹಿರಿಯ ಕಲಾವಿದರ ತಾಳಮದ್ದಳೆ, ಸಭಾ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ‘ಯಕ್ಷಾಆಂಜನೇಯ ಪ್ರಶಸ್ತಿ’, ಮಹಿಳಾ ಭಾಗವತರಿಗೆ’ ವಿಂಶತಿ ಪ್ರಶಸ್ತಿ’ ಮತ್ತು ವಿಶೇಷ ಸಾಧಕ ಕಲಾವಿದರೊಬ್ಬರಿಗೆ ಬೆಂಗಳೂರಿನ ‘ಜಸ್ಟಿಸ್ ಜಗನ್ನಾಥ ಶೆಟ್ಟಿ ಮೆಮೊರಿಯಲ್ ಪ್ರಶಸ್ತಿ’ ಪ್ರದಾನ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯದರ್ಶಿ ಆನಂದ ಸವಣೂರು, ಸಹಕಾರ್ಯದರ್ಶಿ ಅಚ್ಯುತ್ತ ಪಾಂಗಣ್ಣಾಯ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ದುಗ್ಗಪ್ಪ ಎನ್., ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ಕಿಶೋರಿ ದುಗ್ಗಪ್ಪ, ಹರಿಣಾಕ್ಷಿ ಜೆ. ಶೆಟ್ಟಿ, ಪ್ರೇಮಲತಾ ರಾವ್, ಮಾ. ಪರೀಕ್ಷಿತ್ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.
ಭಾರತಿ ರೈ ಅರಿಯಡ್ಕ ಪ್ರಾರ್ಥಿಸಿ, ರಂಗನಾಥ ರಾವ್ ಬೊಳುವಾರು ಸ್ವಾಗತಿಸಿ ಗುಡ್ಡಪ್ಪ ಬಲ್ಯ ವಂದಿಸಿದರು.
