ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಇದರ ವಾರ್ಷಿಕೋತ್ಸವ ಪ್ರಯುಕ್ತ ‘ಶ್ರೀ ಆಂಜನೇಯ 57’ ಕಾರ್ಯಕ್ರಮವು ದಿನಾಂಕ 25 ಡಿಸೆಂಬರ್ 2025ರಂದು ಅಪರಾಹ್ನ 1-00 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.
ಅಪರಾಹ್ನ 1-00 ಗಂಟೆಗೆ ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ ನಾಯಕ್ ಇವರು ಉದ್ಘಾಟನೆಗೊಳಿಸಲಿದ್ದು, ಬಳಿಕ ಸಂಘದ ಸದಸ್ಯರಿಂದ ‘ತಾಳಮದ್ದಳೆ ವಿಪ್ರಕೂಟ’ ನೂತನ ಪರಿಕಲ್ಪನೆ ಹಾಗೂ 3-00 ಗಂಟೆಗೆ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಶ್ಯಮಂತಕಮಣಿ’ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ.
ಸಂಜೆ 5-00 ಗಂಟೆಗೆ ನಡೆಯಲಿರುವ ಸಭಾ ಕಲಾಪದ ಅಧ್ಯಕ್ಷತೆಯನ್ನು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗದ್ದೆ ಈಶ್ವರ ಭಟ್ ಇವರು ವಹಿಸಲಿದ್ದು, ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಹಿರಿಯ ಕಲಾವಿದ ಪಿ.ಟಿ. ಜಯರಾಮ ಭಟ್ ಪದ್ಯಾಣ ಇವರಿಗೆ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ -2025’ ಮತ್ತು ಹಿರಿಯ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಇವರಿಗೆ ‘ಶ್ರೀಮತಿ ಶಾಂತಾ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

