ಉಡುಪಿ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ದಶಮಾನೋತ್ಸವದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ಶ್ರೀ ಗೋವಿಂದ ನಮನ 90’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.
ಶ್ರೀ ಪುತ್ತಿಗೆ ಮಠದ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಲಿದ್ದು, ಶ್ರೀ ಆದಿಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿ ಮತ್ತು ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಆಚಾರ್ಯರ 90ರ ಶ್ರೀ ಗೋವಿಂದ ನಮನದ ನೆನಪಿನ ಕಾಣಿಕೆ ಬೆಳಕಿಗೆ ಮತ್ತು ಆಚಾರ್ಯರ ಕುರಿತ ಒಂದು ಚಿಕ್ಕ ಬನ್ನಂಜೆ ಕೈಪಿಡಿ ಕೃತಿ ಅನಾವರಣಗೊಳ್ಳಲಿದೆ. ಹರಿದಾಸ ಚಂದ್ರಿಕಾ ಮತ್ತು ಓ.ಆರ್.ಪಿ. ಅಮೆರಿಕ ಆಯೋಜಿಸಿರುವ ಉಷಾಹರಣ ಕಾವ್ಯ ವಿಮರ್ಶೆಯ ಪ್ರಶಸ್ತಿ ಪ್ರದಾನ, ಶ್ರೀಮತಿ ಕವಿತಾ ಉಡುಪಿ ಮತ್ತು ಶ್ರೀಮತಿ ಸುಮಾ ಶಾಸ್ತ್ರಿ ಇವರಿಂದ ‘ಬನ್ನಂಜೆಯವರ ಹಾಡುಗಬ್ಬ’, ಸುಚೇಂದ್ರ ಪ್ರಸಾದ್ ಇವರ ನಿರ್ದೇಶನ ಮತ್ತು ಅಭಿನಯದಲ್ಲಿ ‘ನನ್ನ ಪಿತಾಮಹ’ ನಾಟಕ ಪ್ರದರ್ಶನ ನಡೆಯಲಿದೆ.