ಬೆಳಗಾವಿ : ರಂಗಸಂಪದ ಬೆಳಗಾವಿಯ ತಂಡದ ಹೊಸ ವರ್ಷದ ರಂಗ ಚಟುವಟಿಕೆಗಳ ವಿಶ್ವಾವಸು ಸಂವತ್ಸರ ನಾಟಕ ಪ್ರಾರಂಭೋತ್ಸವವು ದಿನಾಂಕ 17 ಮೇ 2025ರಂದು ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪರಮ ಪೂಜ್ಯ ಶ್ರೀ ಗುರುಸಿದ್ಧಮಹಾಸ್ವಾಮೀಜಿ ಕಾರಂಜಿಮಠ ಇವರ ಅಮೃತ ಹಸ್ತದಿಂದ ದೀಪ ಪೃಜ್ವಲಿಸಿ, ಜಾಗಟೆ ಬಾರಿಸಿ ಉದ್ಘಾಟಿಸಿಲಾಯಿತು.
ಈ ಕಾರ್ಯಕ್ರಮವು ಸಿರಿಗೆರೆಯ ಧಾತ್ರಿ ರಂಗಸಂಸ್ಥೆ ಪ್ರಸ್ತುತ ಪಡಿಸಿದ ನಗೆನಾಟಕ ‘ಶ್ರೀ ಕೃಷ್ಣ ಸಂಧಾನ’ದೊಂದಿಗೆ ಪ್ರಾರಂಭವಾಯಿತು. 95 ನಿಮಿಷಗಳವರೆಗೆ ನೆರೆದ 320 ಪ್ರೇಕ್ಷಕರನ್ನು ತಮ್ಮ ಅಮೋಘ ಆಂಗಿಕ ವಾಚಿಕ ಅಭಿನಯದಿಂದ ನಗಿಸಿ ಹೊಟ್ಟೆ ಹುಣ್ಣಾಗುವಂತೆ ಮಾಡಿದರು.