ಪುತ್ತೂರು : ಶಿವಳ್ಳಿ ಸಂಪದ ಪುತ್ತೂರು (ರಿ.) ಇದರ ಬೊಳುವಾರು ವಲಯದ ನೇತೃತ್ವದಲ್ಲಿ ‘ಶ್ರೀಮದ್ಭಾಗವತ ಸಪ್ತಾಹ’ ಕಾರ್ಯಕ್ರಮವನ್ನು ದಿನಾಂಕ 16 ಆಗಸ್ಟ್ 2025ರಿಂದ 22 ಆಗಸ್ಟ್ 2025ರವೆರೆಗೆ ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಡಾ. ಬೆ.ನಾ. ವಿಜಯೀಂದ್ರ ಆಚಾರ್ಯ ಇವರು ಭಾಗವತ ಪ್ರವಚನ ನೀಡಲಿದ್ದಾರೆ.
ದಿನಾಂಕ 16 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಜಿ.ಎಲ್. ಬಲರಾಮ ಆಚಾರ್ಯ ಇವರು ದೀಪ ಪ್ರಜ್ವಲನೆ ಮಾಡಿ ಈ ಸಪ್ತಾಹವನ್ನು ಉದ್ಘಾಟಿಸಲಿದ್ದು, ವಲಯ ಅಧ್ಯಕ್ಷರಾದ ಗಣೇಶ್ ಕೆದಿಲಾಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ದಿನಾಂಕ 22 ಆಗಸ್ಟ್ 2025ರಂದು ಸಮಾರೋಪ ಸಮಾರಂಭ ನಡೆಯಲಿದೆ.