ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯದ 75ನೇ ವಾರ್ಷಿಕ ಅಮೃತ ಮಹೋತ್ಸವ ಸಾಂಸ್ಕೃತಿಕ ಸಂಗೀತ ಸಂಭ್ರಮ ದಿನಾಂಕ 18-02-2023 ಶನಿವಾರ ಆರಂಭಗೊಂಡಿದ್ದು, ಈ ಸರಣಿಯ ಕೊನೆಯ ಕಾರ್ಯಕ್ರಮ “ಮಂಗಳ ಸಂಗೀತ ನೃತ್ಯ ಧಾರೆ’ಯು ಇದೇ ಬರುವ 07-05-2023ರಂದು ಮಲ್ಲತ್ತ ಹಳ್ಳಿಯ ಕಲಾಗ್ರಾಮ ಸಮುಚ್ಛಯ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ಗಂಟೆಯಿಂದ ಉಂಚ್ಛ ವೃತ್ತಿಯಿಂದ ಕಾರ್ಯಕ್ರಮ ಆರಂಭಗೊಂಡು ಮೊದಲ ಸಂಗೀತ ಕಛೇರಿಯನ್ನು ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರ ನಡೆಸಿಕೊಡಲಿದ್ದು, ಸಂಗೀತ ನಿರ್ದೇಶಕ ವಿದ್ವಾನ್ ಶ್ರೀ ಎಂ. ಎಸ್. ತ್ಯಾಗರಾಜ ಸಹ ಗಾಯಕರಾಗಿ ಸಹಕರಿಸಲಿದ್ದಾರೆ.
ನಂತರ ಶ್ರೀಮತಿ ಎಂ.ಎಸ್. ವಿದ್ಯಾಲಕ್ಷ್ಮಿ ಮತ್ತು ಕು. ಗೌರಿ ಮನೋಹರಿ ‘ವಾಗ್ಗೇಯ ನೃತ್ಯ ವೈಭವ’ ನಡೆಸಿ ಕೊಡಲಿದ್ದಾರೆ. ಇವರಿಗೆ ನಟುವಾಂಗದಲ್ಲಿ ಶ್ರೀಮತಿ ಹೇಮಲತ ಎಸ್.ಆರ್., ಹಾಡುಗಾರಿಕೆಯಲ್ಲಿ ಶ್ರೀ ರಘುರಾಮ್, ಮೃದಂಗದಲ್ಲಿ ಶ್ರೀ ವಿನಯ ನಾಗರಾಜನ್ ಹಾಗೂ ಕೊಳಲಿನಲ್ಲಿ ಶ್ರೀ ರಘುಸಿಂಹ ಇವರು ಸಹಕರಿಸಲಿದ್ದಾರೆ.
ಗುರು ವಿದ್ವಾನ್ ಕೀರ್ತಿಶೇಷ ಶ್ರೀ ಕೆ. ಮಂಜಪ್ಪ ನವರ ಕೃತಿಗಳ ರಚಿತ ಸಂಗೀತ ನಿರ್ದೇಶಕ ವಿದ್ವಾನ್ ಶ್ರೀ ಎಂ. ಎಸ್. ತ್ಯಾಗ ರಾಜ ಸಂಗೀತ ನಿರ್ದೇಶನದ ‘ದಾಸ ಮಂಜು ದಾಸ’ ಧ್ವನಿ ಸುರುಳಿ ಬಿಡುಗಡೆಯು ಇದೇ ಸಂದರ್ಭದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ 75ನೇ ವಾರ್ಷಿಕ ಅಮೃತ ಮಹೋತ್ಸವ ಮಂಜುದಾಸ ರಾಜ್ಯ ಪ್ರಶಸ್ತಿ 2023ರ ಪ್ರದಾನ ಸಮಾರಂಭವು ನಡೆಯಲಿರುವುದು.
ಪ್ರಶಸ್ತಿ ಪುರಸ್ಕೃತರು :
ಶ್ರೀರಾಮ ಲಲಿತಕಲಾ ಮಂದಿರ ಬೆಂಗಳೂರಿನ ಗೌರವ ಕಾರ್ಯದರ್ಶಿ ಕರ್ನಾಟಕ ಕಲಾಶ್ರೀ ಡಾ. ಶ್ರೀ ಜಿ.ವಿ. ಕೃಷ್ಣಪ್ರಸಾದ್, ಸುನಾದ ಗಾನಸುಧಾ ಹುಬ್ಬಳ್ಳಿ ಇದರ ಕಾರ್ಯದರ್ಶಿ ಶ್ರೀಮತಿ ಲತಾ ಜಮಖಂಡಿ, ಬೆಂಗಳೂರು ಗಾಯನ ಸಮಾಜ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರು ಡಾ. ಶ್ರೀ ಎಂ.ಆರ್.ವಿ. ಪ್ರಸಾದ್, ಶ್ರೀರಾಮ ಸೇವಾ ಮಂಡಳಿ ಚಾಮರಾಜ ಪೇಟೆ ಇದರ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಎಸ್.ಎನ್. ರಾಮಪ್ರಸಾದ್, ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ಬೆಂಗಳೂರು ಇದರ ಕಾರ್ಯದರ್ಶಿ ಶ್ರೀ ಸಿ.ಆರ್. ಭಾಷ್ಯಂ, ಶ್ರೀ ವಿದ್ಯಾಗಣಪತಿ ಸೇವಾ ಸಂಘ ಶಿವಮೊಗ್ಗ ಇದರ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಎಚ್.ಆರ್, ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರು ಶ್ರೀ ಎಂ. ಅನಂತ, ಸಂಗೀತ ಕೃಪಾಕುಟೀರ ಬೆಂಗಳೂರು ಇದರ ಸ್ಥಾಪಕ ಕಾರ್ಯದರ್ಶಿ ಡಾ. ವಿದ್ವಾನ್ ಶ್ರೀ ಎನ್.ಎಸ್ ಗುಂಡಾಶಾಸ್ತ್ರಿ, ಮನೋರಂಜನಿ ಸಂಗೀತ ಮಹಾ ವಿದ್ಯಾಲಯ ಚಿಕ್ಕಮಗಳೂರು ಇದರ ಸ್ಥಾಪಕ ಅಧ್ಯಕ್ಷರು ವಿದುಷಿ ಶ್ರೀಮತಿ ಅಪರ್ಣ ಜಯರಾಮ್ ಮತ್ತು ಶ್ರೀ ಬಿ.ಸಿ ಜಯರಾಮ್, ವಿಜಯನಗರ ಸಂಗೀತ ಸಭಾ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರು ಶ್ರೀ ಗಣೇಶ ಪ್ರಸಾದ್, ಗಿರಿನಗರ ಸಂಗೀತ ಸಭಾ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರು ಕರ್ನಾಟಕ ಕಲಾಶ್ರೀ ಎಂ.ಆರ್. ಸತ್ಯನಾರಾಯಣ, ಶಾಸ್ತ್ರೀಯ ಸಂಗೀತ ಸಭಾ ಕಾರ್ಕಳ ಇದರ ಸ್ಥಾಪಕ ಕಾರ್ಯದರ್ಶಿ ಡಾ. ಶ್ರೀ ಪ್ರಕಾಶ್ ಶೆಣೈ ಕೆ, ಮಣಿಕೃಷ್ಣಸ್ವಾಮಿ ಅಕಾಡೆಮಿ ಸುರತ್ಕಲ್ ಇದರ ಕಾರ್ಯದರ್ಶಿ ಶ್ರೀ ಪಿ. ನಿತ್ಯಾನಂದರಾವ್, ರಂಜನಿ ಮೆಮೋರಿಯಲ್ ಟ್ರಸ್ಟ್ ಉಡುಪಿ ಪ್ರೊ. ಶ್ರೀ ವಿ ಅರವಿಂದ ಹೆಬ್ಬಾರ್ ಮತ್ತು ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿದೇವಿ ಮೋಹನಕುಮಾರ.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಆಹ್ವಾನಿತ ಕಲಾವಿದರಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಲಿರುವುದು.