ತೆಂಕಮಿಜಾರು : ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ನೀರ್ಕೆರೆ ಇದರ ಆಶ್ರಯದಲ್ಲಿ ಕುಣಿತ ಭಜನಾ ಸ್ಪರ್ಧೆ ‘ತಾಳ ನಿನಾದಂ-2023’ ದಿನಾಂಕ 18-06-2023ರಂದು ನೀರ್ಕೆರೆಯ ಜಾರಂದಾಯ ದೈವಸ್ಥಾನದ ಮುಂಭಾಗದ ಶ್ರೀರಾಮಕೃಷ್ಣ ಸಭಾಭವನದಲ್ಲಿ ನೆರವೇರಿತು. ಬೆಳಿಗ್ಗೆ ಕುಡುವಿ ಪಾಳ್ಯ ಪೂಮಾವರದ ಗುರಿಕಾರರಾದ ಸಂಜೀವ ಗೌಡರವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಾರಂದಾಯ ಸೇವಾ ಟ್ರಸ್ಟ್ ನೀರ್ಕೆರೆಯ ಗೌರವಾಧ್ಯಕ್ಷರಾದ ಶ್ರೀ ಪೈ. ರಾಧಾಕೃಷ್ಣ ತಂತ್ರಿಯವರು ದೀಪ ಪ್ರಜ್ವಲನೆ ಗೈದು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಜಾರಂದಾಯ ಸೇವಾ ಟ್ರಸ್ಟ್ ನೀರ್ಕೆರೆಯ ಅಧ್ಯಕ್ಷರಾದ ಶ್ರೀ ಅಜಿತ್ ರಾಜ್ ಜೈನ್, ಮಹಾಲಸಾ ಕ್ಲಿನಿಕ್ ನೀರ್ಕೆರೆಯ ಡಾ. ನಾರಾಯಣ ಪೈ, ಖ್ಯಾತ ಯಕ್ಷಗಾನ ಹಿಮ್ಮೇಳ ವಾದಕರಾದ ಶ್ರೀ ಮೋಹನ ಶೆಟ್ಟಿಗಾರ್ ಮಿಜಾರು ಹಾಗೂ ನೀರ್ಕೆರೆಯ ಭಜನಾ ಮಂಡಳಿ ಅಧ್ಯಕ್ಷರಾದ ಜಯರಾಜ್ ಕುಮಾರ್ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಭಜನಾ ಸ್ಪರ್ಧೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯ 20 ತಂಡಗಳು ಭಾಗವಹಿಸಿದ್ದವು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ನೀರ್ಕೆರೆಯ ಮಾಜಿ ಅಧ್ಯಕ್ಷರಾದ ರುಕ್ಮಯ್ಯ ಗೌಡ ವಹಿಸಿದ್ದು, ಅತಿಥಿಗಳಾಗಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಎಂ. ಜನಾರ್ದನ ಗೌಡ, ಕ್ರೀಡಾ ರತ್ನ ಪುರಸ್ಕೃತ ಖ್ಯಾತ ಕಂಬಳ ಓಟಗಾರರಾದ ಶ್ರೀ ಶ್ರೀನಿವಾಸ್ ಗೌಡ ಮಿಜಾರು ಅಶ್ವತ್ಥಪುರ, ಕಾರ್ಕಳ ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ, ನೀರ್ಕೆರೆಯ ಜಾರಂದಾಯ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಅಜಿತ್ ರಾಜ್ ಜೈನ್, ಮಂಗಳೂರು ವಲಯದ ಭಜನಾ ತರಬೇತುದಾರರಾದ ದೀನ್ ರಾಜ್ ಕಳವಾರು, ಧರ್ಮಸ್ಥಳ ಭಜನಾ ಕಮ್ಮಟದ ಸಂಪನ್ಮೂಲ ವ್ಯಕ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಭಜನಾ ತರಬೇತುದಾರರಾದ ಶ್ರೀ ರಮೇಶ್ ಕಲ್ಮಾಡಿ, ಭಜನಾ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಅರುಣ್ ಕುಂದರ್ ಕಲ್ಯಾಣಪುರ, ರಾಜ್ಯ ಮತ್ತು ರಾಷ್ಟ್ರೀಯ ಜಾನಪದ ಮತ್ತು ಭಜನಾ ತೀರ್ಪುಗಾರರಾದ ಶ್ರೀ ನರೇಶ್ ಕುಮಾರ್ ಹಾಗೂ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಕುಮಾರ್ ಭಾಗವಹಿಸಿದರು.
ಪ್ರಥಮ ಬಹುಮಾನ : ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು ,ಕಡ್ತಲ
ದ್ವಿತೀಯ ಬಹುಮಾನ : ಶ್ರೀ ಬಾಲವಿಕಾಸ ಭಜನಾ ಮಂಡಳಿ ಹೊಸಬೆಟ್ಟು, ಸುರತ್ಕಲ್
ತ್ರಿತೀಯ ಬಹುಮಾನ: ಶ್ರೀ ಆಂಜನೇಯ ಭಜನಾ ಮಂಡಳಿ ಸಾಣೂರು, ಕಾರ್ಕಳ
ಸಮಾಧಾನಕರ ಬಹುಮಾನ :
ಶ್ರೀ ರಾಮ ಭಜನಾ ಮಂಡಳಿ,ಮುಚ್ಚೂರುಕಾನ
ಶ್ರೀ ದುರ್ಗಾ ಭಜನಾ ಮಂಡಳಿ ವಿದ್ಯಾನಗರ, ಮುದರಂಗಡಿ