ಉಡುಪಿ : ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಮಾರ್ಪಲ್ಲಿ ಇವರ 40ರ ಸರಣಿ ಕಾರ್ಯಕ್ರಮ ಅಂಗವಾಗಿ ದಿನಾಂಕ 27 ಜುಲೈ 2025 ಭಾನುವಾರದಂದು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಚ್ಚುಲ್ ಕೋಡು ಕುಕ್ಕಿಕಟ್ಟೆ ಇಲ್ಲಿ ‘ಶ್ರೀ ರಾಮ ದರ್ಶನ’ ಎಂಬ ಪ್ರಸಂಗದ ತಾಳಮದ್ದಲೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರು ಶ್ರೀ ಗೋಪಾಲ ಗಾಣಿಗ ಹೆರ0ಜಾಲು, ಚೆಂಡೆ ಮತ್ತು ಮದ್ದಲೆಯಲ್ಲಿ ಅಜಿತ್ ಕುಮಾರ್, ರತ್ನಾಕರ್ ಶೆಣೈ ಹಾಗೂ ಮುಮ್ಮೇಳದಲ್ಲಿ ರುಕ್ಮಾ0ಗದನಾಗಿ ಶ್ರೀಯುತ ರವಿರಾಜ್ ಪನಿಯಾಳ, ಮೋಹಿನಿಯಾಗಿ ಶ್ರೀಯುತ ಶಶಿಕಾಂತ ಶೆಟ್ಟಿ, ವಿಂದ್ಯಾವಳಿಯಾಗಿ ಶ್ರೀಯುತ ಸತೀಶ್ ನಾಯಕ್ ಬೆಳಂಜೆ, ವಿಷ್ಣು ಶ್ರೀಯುತ ಪಶುಪತಿ ಶಾಸ್ತ್ರಿ, ಧರ್ಮಂಗದ ಶ್ರೀಯುತ ಪ್ರಸಾದ್ ಭಟ್ಕಳ ಮುಂತಾದ ಸುಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು.