ಕಿನ್ನಿಗೋಳಿ : ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ (ರಿ.) – ಯುಗಪುರುಷ ಕಿನ್ನಿಗೋಳಿ ಇದರ ವತಿಯಿಂದ ಯಕ್ಷಲಹರಿಯ 35ನೇ ವರ್ಷದ ಸಂಭ್ರಮ ಪ್ರಯುಕ್ತ ದಿನಾಂಕ 03 ಆಗಸ್ಟ್ 2025ರಂದು ನಡೆದ ಕರ್ನಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಳೆ ಸ್ಪರ್ಧಾ ಸಪ್ತಾಹ ‘ಶ್ರೀ ರಾಮಾ ಕಥಾಮಾಲಿಕಾ’ದಲ್ಲಿ ಜಯರಾಮ ದೇವಸ್ಯ ಮತ್ತು ಬಳಗ ಪ್ರಥಮ, ಯಕ್ಷ ಕಲಾ ಮಹಿಳಾ ತಂಡ ಸುರತ್ಕಲ್ ದ್ವಿತೀಯ ಹಾಗೂ ಸರಯೂ ಯಕ್ಷ ಬಳಗ ಕೋಡಿಕಲ್ ಮಂಗಳೂರು ತೃತೀಯ ಬಹುಮಾನ ಪಡೆದುಕೊಂಡವು.
ಮೂಡಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಡಾ. ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರಾ, ಎಂ.ಆರ್.ಪಿ.ಎಲ್. ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ, ಸುರತ್ಕಲ್ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಶಾಖಾ ಪ್ರಬಂಧಕ ಯಾದವ ದೇವಾಡಿಗ, ಕದ್ರಿ ನವನೀತ ಶೆಟ್ಟಿ, ಅಶ್ವಥ್ ರಾವ್, ಆಕಾಶ್ ರಾವ್, ಸುಧಾಕರ ಕುಲಾಲ್, ರಂಜಿತ್ ಆಚಾರ್ಯ, ಭವಿಷ್ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷಲಹರಿ ಮಾಜಿ ಅಧ್ಯಕ್ಷ ದಿ. ಪಿ. ಸತೀಶ್ ರಾವ್ ಅವರ ಸಂಸ್ಮರಣೆಯನ್ನು ಗಣೇಶ್ ಶೆಟ್ಟಿಗಾರ್ ಮಾಡಿದರು. ಅಗರಿ ಸಮೂಹ ಸಂಸ್ಥೆಗಳ ಅಗರಿ ರಾಘವೇಂದ್ರ ರಾವ್ ವಿದ್ಯಾರ್ಥಿ ವೇತನ ವಿತರಿಸಿದರು. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ವಸಂತ ದೇವಾಡಿಗ, ಉಮೇಶ್ ನೀಲಾವರ, ದಿನಕರ ಮೆಂದ, ಶ್ರೀವತ್ಸ, ಪಶುಪತಿ ಶಾಸ್ತ್ರಿ, ದೀಪ್ತಿ ಬಾಲಕೃಷ್ಣ ಭಟ್, ವಿನಯ ಆಚಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮಹಾವೀರ ಪಾಂಡಿ ಕಾಂತಾವಾರ ಇವರನ್ನು ಸನ್ಮಾನಿಸಲಾಯಿತು. ರತ್ನಾ ಎಸ್. ಕೋಟ್ಯಾನ್ ದಾಮಸ್ಕಟ್ಟೆಗೆ ಕಲಾ ಪೋಷಕ ಗೌರವ ನೀಡಲಾಯಿತು.