ಪುತ್ತೂರು : ಶ್ರೀ ಆಂಜನೇಯ 55ರ ಸಂಭ್ರಮ ಇದರ ಅಂಗವಾಗಿ, ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮೆ ಇಲ್ಲಿ ನಡೆಯಲಿರುವ ಶ್ರೀ ರಾಮಾಯಣ ದರ್ಶನಂ ತಾಳಮದ್ದಳೆ ಸಪ್ತಾಹದ ಪ್ರಯುಕ್ತ ದಿನಾಂಕ 26-08-2023ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ‘ಶ್ರೀರಾಮ ವನ ಗಮನ’ ಎಂಬ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಶ್ರೀ ಗಿರೀಶ್ ಮುಳಿಯಾಲ, ಚಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಮುರಳೀಧರ ಕಲ್ಲೂರಾಯ ಕುಂಜೂರುಪಂಜ, ಶ್ರೀ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ ಬಾರ್ಯ (ದಶರಥ), ಶ್ರೀ ಶ್ರೀಧರ್ ರಾವ್ ಕುಂಬ್ಳೆ (ಕೈಕೇಯಿ), ಶ್ರೀ ಪಕಳಕುಂಜ ಶ್ಯಾಮ್ ಭಟ್ (ಮಂಥರೆ), ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ರಾಮ) ಮತ್ತು ಶ್ರೀ ದುಗ್ಗಪ್ಪ ನಡುಗಲ್ಲು (ಲಕ್ಷ್ಮಣ) ಸಹಕರಿಸಿದರು.
ಶ್ರೀ ದೇವಳದ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್ ಕಲ್ಲಮೆ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮುಖ್ಯ ಅತಿಥಿ ಕೈಯೂರು ನಾರಾಯಣ ಭಟ್ ಶುಭ ಕೋರಿದರು. ಸಂಘದ ಸಂಚಾಲಕ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ಕೋಶಾಧಿಕಾರಿ ಶ್ರೀ ದುಗ್ಗಪ್ಪ ನಡುಗಲ್ಲು ವಂದಿಸಿದರು. ಶ್ರೀ ಸುಧೀಂದ್ರ ಅಡಿಗ, ಶ್ರೀ ರಂಗನಾಥ ರಾವ್, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಶ್ರೀ ಆನಂದ ಸವಣೂರು ಸಹಕರಿಸಿದರು. ಶ್ರೀ ವೇದವ್ಯಾಸ ರಾಮ ಕುಂಜ, ಅನುರಾಧ ಸೀತಾರಾಮ್ ಭಟ್, ಸ್ವರ್ಣಲತಾ ಕೆ.ಎನ್., ಅಧ್ಯಾಪಕಿ ವಿಜಯಲಕ್ಷ್ಮಿ, ರಾಜಗೋಪಾಲ್ ಭಟ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ಗುಂಪೆ ಕೇಶವ ಭಟ್ ಅವರನ್ನು ಶಾಲು ಹೊದಿಸಿ ಗೌರವಿಸಿದರು.