ಕಾಸರಗೋಡು : ಸಂಘಟಕ ಕಲಾವಿದ, ಕನ್ನಡ ಮುಂದಾಳು ಶ್ರೀ ರವಿ ತೀರಣ್ಣನವರ್ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಹಾವೇರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ಕನ್ನಡ ಭವನ ನಿರ್ದೇಶಕರಾದ ಡಾ. ಕೊಲಚಪ್ಪೆ ಗೋವಿಂದ ಭಟ್ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ರವಿ ತಿರುಕಣ್ಣನವರ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ ಕಾಸರಗೋಡು ಪ್ರದೇಶಕ್ಕೆ ಕರ್ನಾಟಕದಿಂದ ಆಗಮಿಸುವ, ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿಗಳಿಗೆ ‘ಉಚಿತ ವಸತಿ ಸೌಕರ್ಯ” ಹಾಗೂ ಕನ್ನಡ ಭವನ ರಜತ ಸಂಭ್ರಮ ವಿಶೇಷ ಕಾರ್ಯಕ್ರಮ ಸಂಘಟನೆ, “ಮನೆಗೊಂದು ಗ್ರಂಥಾಲಯ – ಪುಸ್ತಕವೇ ಸತ್ಯ -ಪುಸ್ತಕವೇ ನಿತ್ಯ” ಕಾರ್ಯಕ್ರಮಗಳ ಜವಾಬ್ದಾರಿ ಸ್ವೀಕರಿಸಿ, ಘಟಕವನ್ನು ವಿಸ್ತರಿಸಿ ಕಾರ್ಯ ಪ್ರವೃತರಾಗಬೇಕೆಂದು ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಚಾಲಕಿ ಸಂಧ್ಯಾರಾಣಿ ಟೀಚರ್ ಜಂಟಿಯಾಗಿ ತಿಳಿಸಿದ್ದಾರೆ.