ಮಂಗಳೂರು : ಮಧುರ ತರಂಗ (ರಿ.) ಮಂಗಳೂರು ಅರ್ಪಿಸುವ ವಜ್ರ ಮಹೋತ್ಸವದ ಅಂಗವಾಗಿ ‘ಶ್ರೀ ಸಿದ್ಧಿವೃದ್ಧಿ ಸ್ವರಮಾಧುರ್ಯ’ ಸಂಗೀತ ಗಾಯನ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 22 ನವೆಂಬರ್ 2025ರ ಶನಿವಾರ ಬೆಳಿಗ್ಗೆ 9-00ರಿಂದ 7-30ರವರೆಗೆ ಮಂಗಳೂರು ಪಾಂಡೇಶ್ವರ ಪೊಲೀಸ್ ಲೇನ್ ಇಲ್ಲಿರುವ ಶ್ರೀ ಮುನೀಶ್ವರ ಮಹಾ ಗಣಪತಿ ದೇವಸ್ಥಾನದ ಸಭಾಗ್ರಹದಲ್ಲಿ ನಡೆಯಿತು.
ಆಚಾರ್ಯ ಜಗದೀಶ್ ಶಿವಪುರ ರಚಿಸಿರುವ 150 ಗೀತೆಗಳಲ್ಲಿ ವಿಭಿನ್ನ 10 ಗೀತೆಗಳಲ್ಲಿ ಆಯ್ಕೆ ಮಾಡಿ ಹಾಡಿ ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ, ಫಲಕ ನೀಡಲಾಯಿತು. ಷಟ್ಟಿ ಪೂರ್ತಿ 60 ತುಂಬಿದ ಹಿರಿಯ ಸಂಗೀತ ಆಸಕ್ತಿಯುಳ್ಳ ಕಲಾ ಪ್ರೇಮಿಗಳಿಗೆ ಪದ್ಮನಾಭ ರಾಮಕೃಷ್ಣ ಮಂಟಪದಲ್ಲಿ ಗಾಯನ ಸ್ಪರ್ಧೆ ನಡೆಯಿತು. ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಸಮಾರಂಭ ಉದ್ಘಾಟನೆಯನ್ನು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಶ್ರೀಮತಿ ಸುಗುಣ ಕಾಮತ್ ಇವರು ಮಾಡಿದರು. ಸಂಗೀತ ಶಿಕ್ಷಕ, ಗಾಯಕ ನಿರ್ದೇಶಕ ಆಚಾರ್ಯ ಜಗದೀಶ್ ಶಿವಪುರ ಪ್ರಸ್ತಾವನೆ ಮಾಡಿದರು. ಖ್ಯಾತ ಸಂಗೀತ ನಿರ್ದೇಶಕರಾದ ಚರಣ್ ಕುಮಾರ್ ಶುಭಾಶoಸನೆ ಮಾಡಿದರು.

ಉಡುಪಿಯ ಉದ್ಯಮಿ ಕೆ.ಬಿ. ಜಗದೀಶ್ ಗೌರವ ಅಧ್ಯಕ್ಷತೆ ವಹಿಸಿದರು. ಯಕ್ಷಗಾನ ರಂಗದ ಮೇರು ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗಾಗಿ ಜಗದೀಶ್ ಶಿವಪುರ ಇವರು ಪಟ್ಲರ ಬಗ್ಗೆ ಗೀತ ರಚನೆ, ಸಂಗೀತ ನಿರ್ದೇಶನ ಹಾಡಿ ಕಂಠದಾನ ಮಾಡಿ ಹಾಡಿ ಸಮರ್ಪಣೆ ಮಾಡಿದ ಗೀತೆಯನ್ನು ವೇಣುಗೋಪಾಲ ಪೈ, ಚರಣ್ ಕುಮಾರ್ ರವರು ವಿಡಿಯೋ ಅಲ್ಬಮ್ ಗೀತೆಯನ್ನು ಬಿಡುಗಡೆಗೊಳಿಸಿದರು. ಸ್ವರ ಕಂಠೀರದ ಯು ಟ್ಯೂಬ್ ಚಾನೆಲ್ ನಲ್ಲಿ ಪ್ರಸ್ತುತಗೊಳಿಸಲಾಯಿತು. ಜಿ.ಎಸ್. ಆಚಾರ್ಯ, ಮೋಹನ್ ದಾಸ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸಂಜೆ ಸಮಾರೋಪ ಸಮಾರಂಭಕ್ಕೆ ಶ್ರೀಮತಿ ಶೋಭಾ ದೇವಾಡಿಗ ದೀಪ ಪ್ರಜ್ವಲನೆಗೈದರು. ಷಷ್ಠಿಪೂರ್ತಿ ಜನ್ಮದಿನ ಸಂಭ್ರಮ ಆಚರಿಸಿದ ಜಗದೀಶ ಶಿವಪುರ ಇವರನ್ನು ಅಭಿನಂದಿಸಲಾಯಿತು. ಎಸ್.ಪಿ. ಹರಿದಾಸ್ (ವಿಪ್ರೊ ಬೆಂಗಳೂರು) ಸಮಾರಂಭದ ಅಧ್ಯಕ್ಷತೆ ವಹಿಸಿದರು. ಪ್ರದೀಪ್ ಕಲ್ಕೂರ ಕಲ್ಕೂರರು “ಕಲಾವಿದರು ಸಂಸ್ಕೃತಿಯ ಸಂರಕ್ಷಕರು. ಅವರ ಬದುಕಿನಾದ್ಯಂತ ಕಲಾ ಸಾಧನೆಯ ತಪಸ್ಸಿನ ಮೂಲಕ ಸಂಸ್ಕೃತಿಯನ್ನು ಬಿತ್ತರಿಸುತ್ತಾರೆ. ಅಂತಹ ಕಲಾವಿದರ ವೈಯಕ್ತಿಕ ಬದುಕಿಗೆ ಅಪಚಾರ ತರುವಂತಹ ಮಾತುಗಳನ್ನಾಡಬಾರದು” ಎಂದು ತಮ್ನ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.
ಜನಾರ್ದನ ಹಂದೆ ಚಂಪುಕಾವ್ಯ ಪ್ರಸ್ತುತಿ ಮಾಡಿದರು. ಡಾ. ಎಸ್.ಪಿ. ಗುರುದಾಸ್, ಪಡೀಲ್ ಗೋಪಿನಾಥ್ ಕಾಮತ್, ರಮೇಶ್ ಸಾಲ್ಯಾನ್, ವೆಂಕಟೇಶ್ ಜಪ್ಪು ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಮ. ವೆಂಕಟೇಶ್ ಆಚಾರ್ ಮಾಜಿ ಕಾರ್ಪೊರೇಟರ್, ಸುಜೀರ್ ವಿನೋದ್ ಕಾಳಿಕಾ ಕ್ರಿಯೇಷನ್ಸ್ ಜಾಹಿರಾತು ಸಂಸ್ಥೆ ಇವರಿಗೆ ಗೌರವ ಸನ್ಮಾನ ಮಾಡಲಾಯಿತು. ಖ್ಯಾತ ತಬಲಾ ವಾದಕರಾದ ದೀಪಕ್ ರಾಜ್ ಇವರಿಗೆ ಬಿರುದು ಸನ್ಮಾನ ನೀಡಲಾಯಿತು. ಆಚಾರ್ಯ ಜಗದೀಶ್ ಶಿವಪುರ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ನಯನ ಟಿ. ದಿವಾಕರ್ ಸಹಕರಿಸಿದರು.
