ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ಕಲಾಕೇಂದ್ರದ ನಿಕಟಪೂರ್ವ ಅಧ್ಯಕ್ಷರಾದ ರಂಗಭೂಮಿ ನಿರ್ದೇಶಕರಾದ ಐರೋಡಿ ವೈಕುಂಠ ಹೆಬ್ಬಾರ್ ಸಂಸ್ಮರಣಾ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2025ರಂದು ಅಪರಾಹ್ನ 2-30 ಗಂಟೆಗೆ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಧಾಕೃಷ್ಣ ಕಲ್ಚಾರ್ ರಚಿತ ‘ಶಲ್ಯಭೇಧನ’ ತಾಳಮದ್ದಲೆಯಲ್ಲಿ ಗಣೇಶ ಆಚಾರ್ಯ ಬಿಲ್ಲಾಡಿ, ರಾಘವೇಂದ್ರ ಹೆಗಡೆ, ವಾಗ್ವೀಲಾಸ ಭಟ್ಟ, ಉಮಾಕಾಂತ ಭಟ್, ರಾಧಾಕೃಷ್ಣ ಕಲ್ಚಾರ್, ಪ್ರಭಾಕರ ಜೋಷಿ ಮತ್ತು ಮಲ್ಪೆ ಲಕ್ಷ್ಮೀನಾರಾಯಣ ಸಾಮಗ ಇವರುಗಳು ಭಾಗವಹಿಸಲಿದ್ದಾರೆ. 5-00 ಗಂಟೆಗೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ಅಧ್ಯಕ್ಷರಾದ ಆನಂದ ಸಿ. ಕುಂದರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ದಿವಂಗತ ವೈಕುಂಠ ಹೆಬ್ಬಾರ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಗೇರುಸೊಪ್ಪೆ ಶಾಂತಪ್ಪಯ್ಯ ರಚಿತ ‘ಶಲ್ಯ ಸಾರಥ್ಯ’ ತಾಳಮದ್ದಲೆಯಲ್ಲಿ ಶಂಕರ ಪೈ, ಕೃಷ್ಣ ಪ್ರಕಾಶ್ ಉಳಿತ್ತಾಯ, ರಾಜಾರಾಮ ರಾವ್, ಜಬ್ಬಾರ್ ಸಮೊ, ಪವನ್ ಕಿರಣಕೆರೆ ಇವರುಗಳು ಸಹಕರಿಸಲಿದ್ದಾರೆ.