ಮಂಗಳೂರು : ಶ್ರೀ ವಿನಾಯಕ ಯಕ್ಷಕಲಾ ಫೌಂಡೇಷನ್ (ರಿ.) ಇದರ 16ನೇ ವರುಷದ ‘ಶ್ರೀ ವಿನಾಯಕ ಯಕ್ಷಕಲೋತ್ಸವ 2024’ ಕಾರ್ಯಕ್ರಮಗಳನ್ನು ದಿನಾಂಕ 01 ಡಿಸೆಂಬರ್ 2024ರಂದು ಮಧ್ಯಾಹ್ನ 1-30 ಗಂಟೆಗೆ ಎಸ್. ಕೋಡಿ ಪದ್ಮಾವತಿ ಲಾನ್ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ ಮತ್ತು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಮಧ್ಯಾಹ್ನ 3-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಇವರ ವಹಿಸಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಇವರು ಶುಭಾಶಂಶನೆಗೈಯ್ಯಲಿದ್ದಾರೆ. ಇದೇ ಸಂದರ್ಭದಲ್ಲಿ ‘ಶ್ರೀ ವಿನಾಯಕ ಯಕ್ಷಕಲೋತ್ಸವ 2024’ ಪ್ರಶಸ್ತಿ ಮತ್ತು ‘ಶ್ರೀ ವಿನಾಯಕ ಯಕ್ಷಕಲಾ ಗೌರವ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಶ್ರೀಕೃಷ್ಣ ಪಾರಿಜಾತ’ ಹಾಸ್ಯ ವೈಭವ, ‘ಶ್ರೀರಾಮ ಕಥಾಸಾರ’ ನೃತ್ಯ ರೂಪಕ ಮತ್ತು ‘ಲವಕುಶ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.