ಮಂಗಳೂರು : ಯಕ್ಷಾರಾಧನಾ ಕಲಾಕೇಂದ್ರ (ರಿ.) ಉರ್ವ ಮಂಗಳೂರು ಇದರ ಹದಿನೈದನೇ ವರ್ಷಾಚರಣೆಯ ಸಂಭ್ರಮ ಪ್ರಯುಕ್ತ ಕವಿ ಅಗರಿ ಶ್ರೀ ನಿವಾಸ ಭಾಗವತ ವಿರಚಿತ ‘ಶ್ರೀ ದೇವಿ ಮಹಾತ್ಮ್ಯೆ’ ಪ್ರಸಂಗದ ಯಕ್ಷಗಾನ ಬಯಲಾಟವು ದಿನಾಂಕ 13-07-2024ರಂದು ಮಧ್ಯಾಹ್ನ 3-00 ಗಂಟೆಗೆ ಸರಿಯಾಗಿ ಮಂಗಳೂರಿನ ಕುದ್ಮುಲ್ ರಂಗರಾವ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ.
ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಶ್ರೀಹರಿನಾರಾಯಣ ಆಸ್ರಣ್ಣ ಇವರು ಆಶೀರ್ವಚನ ನೀಡಲಿರುವರು. ಇದೇ ಸಂದರ್ಭದಲ್ಲಿ ಖ್ಯಾತ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ವಿಶ್ವೇಶ್ವರ ಭಟ್ ಇವರಿಗೆ ‘ಯಕ್ಷಕಲಾರಾಧಕ ಪ್ರಶಸ್ತಿ-2024’ ಮತ್ತು ಸನಾತನ ಯಕ್ಷಾಲಯ ನಿರ್ದೇಶಕರು ಹಾಗೂ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ರಾಕೇಶ್ ರೈ ಅಡ್ಕ ಇವರಿಗೆ ‘ಯಕ್ಷ ಶಿಕ್ಷಣ ಪುರಸ್ಕಾರ’ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಗುರು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ ರಾವ್ ಇವರ ಶಿಷ್ಯವೃಂದದವರಿಂದ ಯಕ್ಷಗಾನ ಪ್ರದರ್ಶನ ಜರುಗಲಿದೆ.