ಮೈಸೂರು : ನಟನ ಸಂಸ್ಥೆಯು ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಮನುಜ ರಂಗ ಟ್ರಸ್ಟ್ (ರಿ.) ಬೆಂಗಳೂರು ಆಯೋಜನೆಯಲ್ಲಿ ಶ್ರೀ ಸಾಯಿ ಕಲಾ ಯಕ್ಷ ಬಳಗ ಮತ್ತು ಡಾ. ಕೆ. ಶಿವರಾಮ ಕಾರಂತ ಬಾಲವನ ಪುತ್ತೂರು ಮಹಿಳಾ ಯಕ್ಷಗಾನ ಮೇಳದವರಿಂದ ಪ್ರಪ್ರಥಮ ಬಾರಿಗೆ ಮೈಸೂರಿನಲ್ಲಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗವು ಪ್ರದರ್ಶನಗೊಳ್ಳಲಿದೆ.
ನಮ್ಮೊಂದಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಿಕೆ ಮತ್ತು ಕೆಜೆಎಸ್ ಅಧ್ಯಕ್ಷ ಗ್ರೇಶಿಯಸ್ ರೋಡ್ರಿಗಸ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ನಟನದ ಸಂಸ್ಥಾಪಕ ಮಂಡ್ಯ ರಮೇಶ್ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗೆ 93804 86553, 72595 3777 ಸಂಪರ್ಕಿಸಬಹುದು.