ಪುತ್ತೂರು : ಬಹುವಚನಂ ಇದರ ವತಿಯಿಂದ 20ನೇ ವರ್ಷದ ಶ್ರೀರಾಮ ನವಮಿ ಮತ್ತು ಸಾಹಿತ್ಯ ಸಂಗೀತೋತ್ಸವ ಕಾರ್ಯಕ್ರಮವನ್ನು ದಿನಾಂಕ 06 ಏಪ್ರಿಲ್ 2025ರಂದು ಸಂಜೆ 4-00 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ.
ಸಂಜೆ 4-30 ಗಂಟೆಗೆ ‘ರಾಮಕಥಾ ಸುಧಾ’ ಎಂಬ ವಿಷಯದ ಬಗ್ಗೆ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಪ್ರೊ. ವಿ. ಅರವಿಂದ ಹೆಬ್ಬಾರ್ ಇವರಿಂದ ಉಪನ್ಯಾಸ ಮತ್ತು 5-30ರಿಂದ ನಡೆಯಲಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಕುಮಾರಿ ಅರ್ಚನಾ ಮತ್ತು ಕುಮಾರಿ ಸಮನ್ವಿ ಇವರು ಹಾಡುಗಾರಿಕೆಗೆ ಚೆನ್ನೈಯ ವಿದುಷಿ ಗಾಯತ್ರಿ ವಿಭಾವರಿ ವಯಲಿನ್ ಹಾಗೂ ಬೆಂಗಳೂರಿನ ಸುನಿಲ್ ಸುಬ್ರಹ್ಮಣ್ಯ ಮೃದಂಗಂನಲ್ಲಿ ಸಾಥ್ ನೀಡಲಿದ್ದಾರೆ.