ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಮಂಗಳಗಂಗೆ ವಾರ್ಷಿಕ ಸಂಚಿಕೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಇವರ ಆಶ್ರಯದಲ್ಲಿ ಎರಡು ದಿನಗಳ ‘ಸೃಜನೇತರ ಬರೆವಣಿಗೆ ಕಾರ್ಯಾಗಾರ’ವನ್ನು ದಿನಾಂಕ 17 ಮತ್ತು 18 ಅಕ್ಟೋಬರ್ 2025ರಂದು ಅಪರಾಹ್ನ 2-00 ಗಂಟೆಗೆ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಮಾನ್ಯ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ ಇವರು ಈ ಕಾರ್ಯಾಗಾರವನ್ನು ಉದ್ಘಾಟನೆ ಮಾಡಲಿದ್ದಾರೆ. ‘ಸೃಜನೇತರ ಬರೆವಣಿಗೆಯ ಕಲ್ಪನೆ ಸಾಧ್ಯತೆಗಳು ಮಾಧ್ಯಮಗಳು ಇತಿ ಮಿತಿ’ ಎಂಬ ವಿಷಯದ ಬಗ್ಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ ಇವರು ವಿಷಯ ಮಂಡನೆ ಮಾಡಲಿದ್ದಾರೆ.
ದಿನಾಂಕ 18 ಅಕ್ಟೋಬರ್ 2025ರಂದು ಪೂರ್ವಾಹ್ನ 9-30 ಗಂಟೆಗೆ ‘ಕಿರು ಬರೆವಣಿಗೆ’ ಬಗ್ಗೆ ಹಿರಿಯ ಲೇಖಕರಾದ ಡಾ. ಚ. ನ. ಶಂಕರ್ ರಾವ್, ‘ನುಡಿ ಚಿತ್ರಗಳು ಮತ್ತು ಇತರ ಪತ್ರಿಕಾ ಬರೆವಣಿಗೆಯಾ ಸಾಧ್ಯತೆಗಳು’ ಬಗ್ಗೆ ಪತ್ರಕರ್ತ ಆರ್.ಸಿ. ಭಟ್ ಮತ್ತು ‘ಬರೆವಣಿಗೆಯ ವಿಮರ್ಶೆ’ ಬಗ್ಗೆ ಪತ್ರಕರ್ತ ಗುರುಪ್ರಸಾದ್ ಟಿ.ಎನ್. ಇವರು ವಿಷಯ ಮಂಡನೆ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ. ರಾಜು ಮೊಗವೀರ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರು ಇವರು ಸಮಾರೋಪ ಭಾಷಣ ಮಾಡಲಿದ್ದಾರೆ.