ಬೆಂಗಳೂರು : ಕಲಾ ದರ್ಶಿನಿ ಟ್ರಸ್ಟ್ (ರಿ.) ಮತ್ತು ಸೃಷ್ಟಿ ಕಲಾಮಂದಿರ ಇವರ ಸಹಯೋಗದಲ್ಲಿ ಚಿತ್ರ ಕಲಾವಿದ ಚಂದನ್ ಮತ್ತು ಸೃಷ್ಟಿ ಚಿತ್ರಕಲಾ ವಿದ್ಯಾರ್ಥಿಗಳಿಂದ ‘ಸೃಷ್ಟಿ ಚಿತ್ರ ಸಂಭ್ರಮ’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 05 ಡಿಸೆಂಬರ್ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ಸೃಷ್ಟಿ ಕಲಾಮಂದಿರದಲ್ಲಿ ನಡೆಯಲಿದೆ.
ನರಹರಿ ರಾವ್ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ಸುಚಿತ್ರ ಫಿಲಂ ಸೊಸೈಟಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಜಯಶ್ರೀ ಕಾಸರವಳ್ಳಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ದಿನಾಂಕ 6 ಮತ್ತು 7 ಡಿಸೆಂಬರ್ 2025ರಂದು ಬೆಳಗ್ಗೆ 10-00ರಿಂದ ಸಂಜೆ 8-00 ಗಂಟೆಗೆ ತನಕ ಚಿತ್ರ ಪ್ರದರ್ಶನಗೊಳ್ಳಲಿದೆ.

