ವಿರಾಜಪೇಟೆ : ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ದಿನೇಶ್ ಫೌಂಡೇಶನ್ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಜೆಎಸ್‍ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆಯಿತು
ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಭರತನಾಟ್ಯ ಕಲಾವಿದೆ ಕೆ. ಪಿ. ದಿಥ್ಯ ಇವರಿಗೆ ‘ಸ್ಟಾರ್ ಆಫ್ ಕರ್ನಾಟಕ-2025’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿಥ್ಯ ಇವರು ವಿರಾಜಪೇಟೆ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ವಿರಾಜಪೇಟೆಯ ನಾಟ್ಯಂಜಲಿ ನೃತ್ಯ ಶಾಲೆಯಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ವಿರಾಜಪೇಟೆಯ ಚಿಕ್ಕಪೇಟೆಯ ನಿವಾಸಿ ನಿವೃತ್ತ ಶಿಕ್ಷಕರುಗಳಾದ ಕೊಂಫುಳಿ ಪಳಂಗಪ್ಪ, ತಾರಾಮಣಿ ಅವರ ಮೊಮ್ಮಗಳು ಹಾಗೂ ಪೃಥ್ವಿ ಕುಮಾರ್, ಭವ್ಯ ದಂಪತಿಯ ಪುತ್ರಿ.
Subscribe to Updates
Get the latest creative news from FooBar about art, design and business.
Previous Articleಮೂಡುಬಿದಿರೆಯ ಶ್ರೀಜೈನ ಮಠದಲ್ಲಿ ಪಾಕ್ಷಿಕ ತಾಳಮದ್ದಲೆ ಸರಣಿ | ಜುಲೈ 24