ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಬೆಂಗಳೂರಿನ ಬಾಲ ಪ್ರತಿಭೆ ಕುಮಾರಿ ನಿಹಾರಿಕ ಹೆಚ್.ಎನ್. ಇವರನ್ನು ‘ಕರ್ನಾಟಕ ಸುವರ್ಣ ಸಿರಿ’ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ನವೀನ್ ಹೆಚ್.ಎಂ. ಮತ್ತು ಶ್ರೀಮತಿ ದೀಪಾ ಕೆ.ಹೆಚ್. ಇವರ ಸುಪುತ್ರಿಯಾಗಿರುವ ನಿಹಾರಿಕ ಹೆಚ್.ಎನ್. ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಿತ್ರಕಲೆ, ಭರತನಾಟ್ಯ, ಸಂಗೀತ, ಕೀಬೋರ್ಡ್ ಮುಂತಾದ ಲಲಿತ ಕಲೆಗಳ ಎಲ್ಲಾ ಪ್ರಕಾರಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಸೇರಿದಂತೆ ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.