ಬೆಂಗಳೂರು : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ದಿನಾಂಕ 10 ಏಪ್ರಿಲ್ 2025ರಂದು ನಡೆದ ನಾಡಿನ ಸಾಹಿತಿಗಳು ಮತ್ತು ಸಾಂಸ್ಕೃತಿಕ ಪರಿಚಾರಕರಾದ ಡಾ. ರಾಮಲಿಂಗೇಶ್ವರಾ ಸಿಸಿರಾ ಇವರ ಬದುಕು-ಬರಹದ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ 2025ರ ಸಾಲಿನ ‘ಡಾ. ಸಿಸಿರಾ ಯುವ ಸಾಹಿತ್ಯ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ನಾಡೋಜ ಪ್ರೊ. ಹಂಪನಾ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹಾಗೂ ನಾಡೋಜ ಡಾ. ವೂಡೇ ಪಿ. ಕೃಷ್ಣ, ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡರು, ಹಿರಿಯ ಸಾಹಿತಿಗಳಾದ ಕೆ.ಎಂ. ರೇವಣ್ಣ, ಉಪನ್ಯಾಸಕರಾದ ಡಾ. ವಾದಿರಾಜ್, ಕವಯತ್ರಿ ಶ್ರೀಮತಿ ಶಾಂತಿ ವಾಸು ಹಾಗೂ ಡಾ. ರಾಮಲಿಂಗೇಶ್ವರಾ ಸಿಸಿರಾ ಇವರುಗಳು ಎಮ್. ರಮೇಶ ಕಮತಗಿ ಇವರಿಗೆ ಅವರ ಎಂಟು ವರ್ಷದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.