ಬೆಂಗಳೂರು : ಕರ್ನಾಟಕ ಸರ್ವೋದಯ ಮಂಡಲವು ‘ಗಾಂಧೀಜಿ ಜಯಂತಿ’ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
‘ಗಾಂಧಿ ನಮಗೆಷ್ಟು ಬೇಕು’, ‘ಗಾಂಧಿ ಅನಂತರದ ಭಾರತ ನಡೆದಿದ್ದು, ಎಡವಿದ್ದು, ಎಲ್ಲಿ – ಹೇಗೆ’, ‘ಗಾಂಧಿ ಇಂದಿಗೂ ಪ್ರಸ್ತುತ ಯಾಕೆ ಹೇಗೆ’, ‘ಯುವಜನರಿಗೆ ಗಾಂಧಿಯನ್ನು ತಲುಪಿಸುವುದು ಹೇಗೆ’, ‘ಸಾಮಾಜಿಕ ಮಾಧ್ಯಮದಲ್ಲಿ ಗಾಂಧಿ ನಿಂದನೆ -ಪರಿಹಾರ ಮಾರ್ಗಗಳು’, ‘ಎಲ್ಲರೂ ಸರಿ ಆದರೆ ಯಾವುದೂ ಸರಿ ಇಲ್ಲ, ಪ್ರಸ್ತುತ ಸ್ಥಿತಿಗತಿಗಳ ಸಮೀಕ್ಷೆ’ ಇವುಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು 500 ಪದಗಳ ಮಿತಿಯಲ್ಲಿ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬರೆದು ಕರ್ನಾಟಕ ರಾಜ್ಯ ಸರ್ವೋದಯ ಮಂಡಲ, ವಲ್ಲಭ ನಿಕೇತನ, ಕುಮಾರ ಪಾರ್ಕ್, ಪೂರ್ವ ಬೆಂಗಳೂರು 560001 ಕ್ಕೆ ಅಥವಾ [email protected] ಸೆಪ್ಟೆಂಬರ್ 15ರೊಳಗೆ ಕಳುಹಿಸಬೇಕು.