ಬೆಂಗಳೂರು : ಸಮರ್ಥ ಭಾರತ ಮತ್ತು ಮಿಥಿಕ್ ಸೊಸೈಟಿ ನಡೆಸುವ ‘ಬಿ ಗುಡ್-ಡೂ ಗುಡ್’ ಅಭಿಯಾನದ ನಿಮಿತ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ‘ನವಭಾರತದ ಕುರಿತು ಸ್ವಾಮಿ ವಿವೇಕಾನಂದರ ಚಿಂತನೆಗಳು’ ಎಂಬ ವಿಷಯವಾಗಿ ಪ್ರಬಂಧ ಬರೆಯಬಹುದಾಗಿದ್ದು, ಪ್ರಬಂಧ ಸಲ್ಲಿಸಲು 10 ಫೆಬ್ರವರಿ 2026 ಅಂತಿಮ ದಿನಾಂಕವಾಗಿದೆ.
ಪ್ರಬಂಧ ಸ್ಪರ್ಧೆಯ ನಿಯಮಗಳು : ಪದವಿ ಮತ್ತು ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಬಂಧ ವಿಷಯದ ಕುರಿತು ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 2500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆಯಬೇಕು. ಬರೆದ ಪ್ರಬಂದವನ್ನು ದಿನಾಂಕ 10 ಫೆಬ್ರುವರಿ 2026ರ ಒಳಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್ ಸೊಸೈಟಿ ನೃಪತುಂಗ ರಸ್ತೆ, ಕೆ.ಆರ್. ವೃತ್ತ ಬಳಿ, ಬೆಂಗಳೂರು-560001 ವಿಳಾಸಕ್ಕೆ ಕಳುಹಿಸುವಂತೆ ಆಯೋಜಕರು ತಿಳಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಿಂದ ಅಥವಾ ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪ್ರಬಂಧದ ಜೊತೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 8722552497, 8861938180 ಸಂಖ್ಯೆಗೆ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಂದವರಿಗೆ ರೂ.10,000/-, ದ್ವಿತೀಯ ಸ್ಥಾನ ಪಡೆದವರಿಗೆ ರೂ.7,500/-, ತೃತೀಯ ಸ್ಥಾನ ಬಂದವರಿಗೆ ರೂ.5,000/- ಜೊತೆಗೆ ಮೂರು ಸ್ಥಾನಕ್ಕೂ ಪ್ರಮಾಣ ಪತ್ರವನ್ನು ನೀಡಲಾಗುವುದು. ತಲಾ ರೂ.1,000/-ದಂತೆ 20 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
