ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಘೋಷಣೆಯಾಗಿ ಐವತ್ತು ವರ್ಷವಾಗಿದ್ದು ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಕನ್ನಡ ನಾಡಿನ ಕನ್ನಡ, ಸಂಸ್ಕೃತಿ, ಇತಿಹಾಸ ಪರಂಪರೆಗಳ ವಿಷಯದ ಕುರಿತು ರಾಜ್ಯ ಮಟ್ಟದ ಉಚಿತ ಲಿಖಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗಿನಂತಿದೆ.
ಪ್ರಥಮ ಬಹುಮಾನ ಬೆಳಗಾವಿ ಜಿಲ್ಲೆಯ ಕರಡಿಗುದ್ದಿಯ ಶ್ರೀಮತಿ ಗಂಗಾದೇವಿ ಚಕ್ರಸಾಲಿ, ದ್ವಿತೀಯ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತಗಲ್‌ನ ವಿನಾಯಕ ರಮೇಶನಾಯ್ಕ ಮತ್ತು ತೃತೀಯ ಬಹುಮಾನ ದಕ್ಷಿಣ ಕನ್ನಡ ಜಿಲ್ಲೆಯ ಜಾಲ್ಸೂರಿನ ಶ್ರೀಮತಿ ಪೂರ್ಣಿಮಾ ಎಂ. ಪಡೆದಿರುತ್ತಾರೆ.
ಈಗಾಗಲೇ ತಿಳಿಸಿದ ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ ಸಮಾರಂಭಗಳಿಲ್ಲದೇ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತರಾದವರಿಗೆ ಮಾತ್ರ ಅವರು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ, ಅವರ ಭಾವಚಿತ್ರದೊ೦ದಿಗೆ ಪ್ರಮಾಣಪತ್ರ ಕಳಿಸಲಾಗುವುದು ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳು ಬಹುಮಾನ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.