ಮಂಡ್ಯ : ಮಂಡ್ಯ ಜಿಲ್ಲೆಯ ರಾಜ್ಯಮಟ್ಟದ ಕನ್ನಡ ಮಾಸಪತ್ರಿಕೆ ‘ಜೀವನಾಡಿ’ ಪತ್ರಿಕೆಯು ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆ 2025 ಏರ್ಪಡಿಸಿದ್ದು, ಕನ್ನಡ ಕಥಾ ಸ್ಪರ್ಧೆ, ಕನ್ನಡ ಪ್ರಬಂಧ ಸ್ಪರ್ಧೆ ಮತ್ತು ಕನ್ನಡ ಕವನ ಸ್ಪರ್ಧೆಗಳು ನಡೆಯಲಿವೆ.
ಕಥೆ, ಪ್ರಬಂಧ, ಕವಿತೆಗಳು ಸ್ವ-ರಚನೆಯಾಗಿದ್ದು, ಬೇರೆಲ್ಲೂ ಪ್ರಕಟವಾಗಿರಬಾರದು. ಕಥೆ 2,500 ಪದಗಳಿಗೆ ಮೀರಬಾರದು. ಪ್ರಬಂಧ 2,000 ಪದಗಳಿಗೆ ಮೀರಿರಬಾರದು. ಕವಿತೆ 24 ಸಾಲುಗಳನ್ನು ಮೀರಿರಬಾರದು. ಅನುವಾದಿತ ಕಥೆ ಪ್ರಬಂಧ ಕವಿತೆಗಳಿಗೆ ಅವಕಾಶವಿಲ್ಲ. ದಿನಾಂಕ 15 ಆಗಸ್ಟ್ 2025 ಕೊನೆಯ ದಿನವಾಗಿದ್ದು, ಈ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು. ಜೀವನಾಡಿ ಮಾಸಪತ್ರಿಕೆ, ನಂ.3, ‘ಚೈತ್ರ’, ಚಾಲುಕ್ಯ ರಸ್ತೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಕಿರಗಂದೂರು ಬಿ.ಒ., ಮಂಡ್ಯ. ಹೆಚ್ಚಿನ ವಿವರಗಳಿಗೆ ಡಾ. ಎಚ್.ಎಸ್. ಮುದ್ದೇಗೌಡ 98451 98098 ಅಥವಾ ಎಂ.ಪಿ. ಕೇಶವ ಕಾಮತ್ 94483 46276 ಸಂಖ್ಯೆಯನ್ನು ಸಂಪರ್ಕಿಸಿರಿ. ಸನ್ಮಾನ ಪ್ರಶಸ್ತಿ ಫಲಕ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಲಾಗುವುದು.