ಬೆಂಗಳೂರು : ಪ್ರಾಮಾಣಿಕ ಮನಸುಗಳ ಸಂಗಮವಾದ ಜನಸಿರಿ ತಂಡ (ರಿ.) ಇದರ ವತಿಯಿಂದ ಕರುನಾಡ ಕವಿಗಳಿಂದ ಏಕಕಾಲದಲ್ಲಿ 21 ನಿಮಿಷದೊಳಗೆ ರೈತರ ಬಗ್ಗೆ ಕವನ ರಚಿಸುವ ‘ರಾಜ್ಯಮಟ್ಟದ ಕವಿಗಳ ಕಲರವ 2025’ ಕಾರ್ಯಕ್ರಮವನ್ನು ದಿನಾಂಕ 09 ಫೆಬ್ರವರಿ 2025ರಂದು ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾಗವಹಿಸುವ ಕವಿಗಳಿಗೆ ನಿಯಮಾವಳಿಗಳು :
* ರೈತರನ್ನು ಕುರಿತು ಕವನ ರಚಿಸಬೇಕು.
* ನಿಗದಿಪಡಿಸಿದ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಸಭಾಂಗಣದಲ್ಲಿ ಹಾಜರಿರಬೇಕು.
* ಜನಸಿರಿ ಸಂಸ್ಥೆ ನೀಡುವ ಬರವಣಿಗೆ ಪ್ರತಿಯಲ್ಲಿರುವ ಸೂಚನೆಗಳನ್ನು ಪಾಲಿಸುತ್ತಾ ಅದರಲ್ಲಿಯೇ ಕವನ ರಚಿಸಬೇಕು.
* ನಕಲು ಮಾಡಿ ಬರೆಯುವ ಹಾಗಿಲ್ಲ. ಪ್ರಾಮಾಣಿಕ ಮನಸ್ಸಿನೊಂದಿಗೆ ಭಾಗವಹಿಸಬೇಕು.
* ಲಘು ಉಪಹಾರದ ವ್ಯವಸ್ಥೆ ಇರುತ್ತದೆ.
* ಭಾಗವಹಿಸುವ ಕವಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
* ಭಾಗವಹಿಸಲು ಇಚ್ಚಿಸುವ ಕವಿಗಳು ಪೂರ್ಣ ವಿಳಾಸದೊಂದಿಗೆ ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕಾದ ದೂರವಾಣಿ ಸಂಖ್ಯೆ- ಜನಸಿರಿ : 9206199955.
* ಕವಿಗಳು ಹೆಸರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ 31 ಜನವರಿ 2025.
* ಕವಿಗಳು ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.