ಬಂಟ್ವಾಳ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪತ್ರಿಕೆಯಾದ ‘ಮಕ್ಕಳ ಜಗಲಿ’ ತನ್ನ ಮೂರನೇ ವರ್ಷದ ಸಂಭ್ರಮದಲ್ಲಿ ‘ಕವನ ಸಿರಿ’ ಮತ್ತು ‘ಕಥಾ ಸಿರಿ’-2023 ಪ್ರಶಸ್ತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಆಯೋಜಿಸುತ್ತಿದ್ದು, ಮಕ್ಕಳಿಂದ ಕವನ ಮತ್ತು ಕಥೆಗಳನ್ನು ಆಹ್ವಾನಿಸುತ್ತಿದೆ.
ಸ್ಪರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಕವನ ಸ್ಪರ್ಧೆಯ ಮೊದಲ ವಿಭಾಗ 5,6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಕವನವು ಕನಿಷ್ಠ 12 ಸಾಲುಗಳು ಹಾಗೂ ಗರಿಷ್ಠ 20 ಸಾಲುಗಳನ್ನು ಹೊಂದಿರಬೇಕು. ಎರಡನೇ ವಿಭಾಗವು 9,10,11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಕವನವು ಕನಿಷ್ಠ 16 ಸಾಲುಗಳು ಹಾಗೂ ಗರಿಷ್ಠ 24 ಸಾಲುಗಳನ್ನು ಹೊಂದಿರಬೇಕು.
ಕಥಾಸ್ಪರ್ಧೆಯ ಮೊದಲ ವಿಭಾಗ 5,6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. A4 ಅಳತೆಯ ಕಾಗದದಲ್ಲಿ ಬರಹವು ಎರಡು ಪುಟಗಳನ್ನು ಮೀರಿರಬಾರದು. ಎರಡನೇ ವಿಭಾಗ 9,10,11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಬರಹಾವು A4 ಅಳತೆಯ ಕಾಗದದಲ್ಲಿ ಮೂರು ಪುಟಗಳನ್ನು ಮೀರಿರಬಾರದು.
ಫಲಿತಾಂಶವನ್ನು 14-11-2023 ರಂದು ಪ್ರಕಟಿಸಲಾಗುವುದು. ಪ್ರತಿ ವಿಭಾಗದಲ್ಲೂ ಸಮಾನ ಎರಡು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ. ಅತ್ಯುತ್ತಮ 10 ಕಥೆಗಳಿಗೆ ಮತ್ತು 10 ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ನೈನ್ ಮೂಲಕ ಪ್ರಮಾಣ ಪತ್ರ ನೀಡಲಾಗುವುದು.
ಸರ್ಧಿಗಳಿಗೆ ಸೂಚನೆಗಳು :
1. ಒಬ್ಬ ಸ್ಪರ್ಧಿಗೆ ಕಥೆ ಮತ್ತು ಕವನ ಎರಡೂ ವಿಭಾಗದಲ್ಲೂ ಸ್ಪರ್ಧಿಸುವ ಅವಕಾಶವಿದೆ.
2. ಭಾಗವಹಿಸುವ ಸ್ಪರ್ಧಿಗಳು ಅತ್ಯುತ್ತಮವಾದ ಒಂದು ಕಥೆ ಮತ್ತು ಒಂದು ಕವನವನ್ನು ಮಾತ್ರ ಕಳುಹಿಸಲು ಅವಕಾಶ.
3. ಸ್ಪರ್ಧಿಗಳು ಕವನ ಮತ್ತು ಕಥೆಯನ್ನು ಕಳುಹಿಸುವಾಗ ಒಂದು ಮೂಲಪ್ರತಿಯೊಂದಿಗೆ ಮೂರು ಜೆರಾಕ್ಸ್ ಪ್ರತಿಗಳನ್ನು ಕಳುಹಿಸಬೇಕು.
4. ಸ್ಪರ್ಧಿಗಳು ಕವನ ಅಥವಾ ಕಥೆಯನ್ನು ಸ್ವಂತ ಕಲ್ಪನೆಯಲ್ಲಿ ಯಾರದೇ ಸಹಾಯವಿಲ್ಲದೆ ರಚನೆ ಮಾಡಿರಬೇಕು.
5. ಓದಿದ ಕಥೆ, ಕವನಗಳು ಅಥವಾ ಯಾರೋ ಹೇಳಿದ ಕಥೆ, ಕವನಗಳನ್ನು ಬರೆದು ಕಳುಹಿಸಬಾರದು. ನಕಲು ಬರಹಗಳನ್ನು ಪರಿಗಣಿಸಲಾಗುವುದಿಲ್ಲ.
6. ವಿದ್ಯಾರ್ಥಿಗಳು ತಾವೇ ಸ್ವತಃ ರಚನೆ ಮಾಡಿರುವ ಕವನ ಮತ್ತು ಕಥೆಯನ್ನು ಶಾಲೆ/ಕಾಲೇಜಿನ ಮುಖ್ಯಸ್ಥರು ಶಾಲಾ ಮೊಹರು, ಸಹಿಯೊಂದಿಗೆ ದೃಢೀಕರಿಸಿರಬೇಕು.
7. ಸ್ವಂತವಾಗಿ ಬರೆದ ಕಥೆ – ಕವನಗಳ ಹಾಳೆಯ ಹಿಂಬದಿಯಲ್ಲಿ ಶಾಲೆ ಕಾಲೇಜಿನ ಮುಖ್ಯಸ್ಥರು ದೃಢೀಕರಿಸದಿದ್ದರೆ ಅಂತಹ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
8. ರಾಜಕೀಯ/ಧರ್ಮ/ಜಾತಿ/ವ್ಯಕ್ತಿ ನಿಂದನೆಯ ಬರಹಗಳಿಗೆ ಅವಕಾಶವಿಲ್ಲ.
9. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
10. ಬರಹದ ಹಿಂಭಾಗದಲ್ಲಿ,
ವಿದ್ಯಾರ್ಥಿಯ ಹೆಸರು :
ಜನ್ಮ ದಿನಾಂಕ
ಶಾಲಾ ಹೆಸರು
ತಾಲೂಕು
ವಾಟ್ಸಾಪ್ ನಂ.
ಈ ರೀತಿ ಮಾಹಿತಿ ಬರೆಯಬೇಕು.
ಕವನ ಮತ್ತು ಕಥೆಗಳನ್ನು ದಿನಾಂಕ 28-10-2023ರ ಒಳಗಾಗಿ ತಾರಾನಾಥ್ ಕೈರಂಗಳ, ಮಕ್ಕಳ ಜಗಲಿ ಕಥೆ ಮತ್ತು ಕವನ ಸ್ಪರ್ಧೆ -2023, ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು, ಮಂಚಿ ಅಂಚೆ, ಕೊಳ್ನಾಡು ಗ್ರಾಮ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. ಪಿನ್ ಕೋಡ್ 574323 ಈ ವಿಳಾಸಕ್ಕೆ ಕಳುಹಿಸಿ ಕೊಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾರನಾಥ್ ಕೈರಂಗಳ -9844820979, ಗೋಪಾಲಕೃಷ್ಣ ನೇರಳಕಟ್ಟೆ – 9980223736, ರಮೇಶ್ ನಾಯ್ಕ ಉಪ್ಪುಂದ – 9448887713, ಅರವಿಂದ ಕುಡ್ಲ – 9844898124, ಶಿವ ಕುಮಾರ್ ಎಂ.ಜಿ – 9964499583, ಅಕ್ಬರ್ ಅಲಿ – 6364137064, ವಿಜಯಾ ಶೆಟ್ಟಿ ಸಾಲೆತ್ತೂರು – 7892587191, ತೇಜಸ್ವಿ ಅಂಬೇಕಲ್ಲು – 9480345799, ತುಳಸಿ ಕೈರಂಗಳ – 9480288214, ವಿದ್ಯಾ ಕಾರ್ಕಳ – 7619447371 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
ಮಕ್ಕಳ ಜಗಲಿ ಪತ್ರಿಕೆಯ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ-2023 | ಕೊನೆಯ ದಿನಾಂಕ ಒಕ್ಟೋಬರ್ 28
No Comments2 Mins Read
Previous Articleಪಡುಕುತ್ಯಾರಿನಲ್ಲಿ ‘ಸುದರ್ಶನ ವಿಜಯ’ ತಾಳಮದ್ದಳೆ