ಪುತ್ತೂರು: ಪುತ್ತೂರಿನ ಸ್ವರ್ಣೋದ್ಯಮಿ ಜಿ. ಎಲ್. ಆಚಾರ್ಯ ಶತಮಾನೋತ್ಸವದ ಅಂಗವಾಗಿ ಶಿಕ್ಷಕರಿಗಾಗಿ ಕವಿಗೋಷ್ಠಿಯನ್ನು ಪುತ್ತೂರಿನ ರೋಟರಿ ಭವನದಲ್ಲಿ ದಿನಾಂಕ 4 ಆಗಸ್ಟ್ 2025ರಂದು ಅಪರಾಹ್ನ ಘಂಟೆ 2.00ಕ್ಕೆ ಏರ್ಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಾಹಿತಿ ಜಯಾನಂದ ಪೆರಾಜೆ ಸಂಪಾದಕತ್ವದ ಭಗವದ್ಗೀತೆಯ ಬಗ್ಗೆ ಕವಿಗಳಿಂದ ರಚಿತವಾದ ಕೃತಿ ‘ಗೀತಾ ಫಲ’ ಲೋಕಾರ್ಪಣೆಗೊಳ್ಳಲಿದೆ ಎಂದು ಕಥಾಬಿಂದು ಪ್ರಕಾಶನ ಮಂಗಳೂರಿನ ಪಿ. ವಿ. ಪ್ರದೀಪ ಕುಮಾರ್ ಮತ್ತು ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಇದರ ಮಾಲಕ ಜಿ. ಎಲ್. ಬಲರಾಮ ಆಚಾರ್ಯ ತಿಳಿಸಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಕವಿಗಳು ಈ ಸಂಖ್ಯೆಯನ್ನು ಸಂಪರ್ಕಿಸಬಹುದು – 9448348234
Subscribe to Updates
Get the latest creative news from FooBar about art, design and business.
Previous Articleಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಜಗದೀಶ್ ಪೈ ನಿಧನ