ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಇದರ ವತಿಯಿಂದ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಬೆಂಗಳೂರು ಮತ್ತು ವೀರಲೋಕ ಕನ್ನಡ ಪುಸ್ತಕ ಪ್ರಕಾಶನ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ವೈಜ್ಞಾನಿಕ, ವೈಚಾರಿಕ ಸಾಹಿತ್ಯ ಸಮಾವೇಶ -2025 ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣ, ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 03 ಜುಲೈ 2025ರಂದು ಬೆಳಗ್ಗೆ 09-30 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂ ಎರಡನೇ ಮಹಡಿಯಲ್ಲಿರುವ ಶೇಷಾದ್ರಿಪುರಂ ಕಾಲೇಜಿನ ದತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9-30 ಗಂಟೆಗೆ ಧ್ವಜಾರೋಹಣ, 9-45 ಗಂಟೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಚಾಲನೆ ಮತ್ತು 10-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಚಾಲನೆಗೊಳ್ಳಲಿವೆ. ಖ್ಯಾತ ಶಿಕ್ಷಣ ತಜ್ಞರಾದ ಡಾ. ಗೀತಾ ರಾಮಾನುಜಂ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ವಿಜ್ಞಾನ ಲೇಖಕ ಡಾ. ಆರ್.ಎಸ್. ರವೀಂದ್ರ ಇವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ 2025ನೇ ಸಾಲಿನ ಶ್ರೀ ಶಶಿಕಾಂತ್ ರಾವ್ ದತ್ತಿ ಪುನೀತ್ ರಾಜಕುಮಾರ್ ಸಾಹಿತ್ಯ ಪ್ರಶಸ್ತಿಯನ್ನು ಹಿತಿಯ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಮತ್ತು ಪುನೀತ್ ರಾಜಕುಮಾರ್ ಸಾಹಿತ್ಯ ಪ್ರಶಸ್ತಿಯನ್ನು ಶ್ರೀಮತಿ ಆಶಾ ಶಿವುಗೌಡ ಮತ್ತು ಡಾ. ಆರ್.ಎಸ್. ರವೀಂದ್ರ ಇವರಿಗೆ ಪ್ರದಾನ ಮಾಡಲಾಗುವುದು. ಮುರಳಿಕೃಷ್ಣ ಬೆಳಾಲು ಇವರ ‘ಭಾವ ಬೆಸುಗೆ’, ಪದ್ಮನಾಭ ಡಿ. ಇವರ ‘ಮನಸಿನ ಪುಟದಲಿ’, ವಿಹಾರಿಕ ಅಂಜನ ಹೊಸಕೇರಿ ಇವರ ‘ಪ್ರವಾಸದ ಆ ದಿನಗಳು’ ಮತ್ತು ಸಂಗಮನಾಥ ಪಿ. ಸಜ್ಜನ ಇವರ ‘ಜೇನುಗೂಡು’ ಕೃತಿಗಳಿಗೆ ಸಿದ್ಧನಹಳ್ಳಿ ಶ್ರೀಮತಿ ಪದ್ಮಮ್ಮ ಶ್ರೀ ಸಿದ್ಧೇಗೌಡ ಸ್ಮಾರಕ ದತ್ತಿ ಪುಸ್ತಕ ಪ್ರಶಸ್ತಿ ನೀಡಲಾಗುವುದು. ಶ್ರೀಮತಿ ಶಾಂತಲಾ ಸುರೇಶ್ ಇವರ ‘ಸಾಹುಕಾರ ನಂದೀಶ’ ಮತ್ತು ‘ಮನದ ಕಡಲು’ ಹಾಗೂ ಸಾಹಿತಿ ವಿಜಯಾ ಗುರುರಾಜ್ ಇವರ ‘ಪಕಳೆಗಳು’ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಕನ್ನಡ ಪ್ರಾಧ್ಯಾಪಕರಾದ ಡಾ. ನರಸಿಂಹಮೂರ್ತಿ ಹಳೇಹಟ್ಟಿ ಇವರಿಂದ ‘ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆ’ಯ ಜಾಗೃತಿ ಕುರಿತು ಪ್ರಬಂಧ ಮಂಡನೆ, ಲೋಕಾರ್ಪಣೆಗೊಳ್ಳಲಿರುವ ಕೃತಿಗಳ ಕುರಿತು ಸಾಹಿತಿ ಡಾ. ಆರ್. ವಾದಿರಾಜು ಮತ್ತು ಕುಂಚ ಕಲಾವಿದೆ ಶ್ರೀಮತಿ ಶಾಂತಿ ವಾಸು ಇವರುಗಳು ಮಾತನಾಡಲಿದ್ದಾರೆ. ಲೋಕಾರ್ಪಣೆಗೊಳ್ಳಲಿರುವ ಕೃತಿಗಳ ಕವಿತೆ ಮತ್ತು ಕಥಾ ವಾಚನ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಗತಿಪರ ಹೋರಾಟಗಾರರಾದ ಶ್ರೀಮತಿ ಇಂದಿರಾ ಕೃಷ್ಣಪ್ಪ ಇವರು ವಹಿಸಲಿದ್ದು, ವಿಜ್ಞಾನ ಲೇಖಕರಾದ ಡಾ. ಹುಲಿಕಲ್ ನಟರಾಜ್ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕರಿಗೆ 2025ರ ಸಾಲಿನ ‘ಶ್ರೀಗಂಧ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ ಕಾರ್ಯಕರ್ತರಿಗೆ ಗೌರವ ಸನ್ಮಾನ ನಡೆಯಲಿದೆ. ಬಳಿಕ ಕುಮಾರಿ ನಯನ ಶಿವಣ್ಣ ಮತ್ತು ಕುಮಾರಿ ಮೋನಿಕಾ ದೇವಿ ಕೆ.ಜಿ. ಇವರಿಂದ ನೃತ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.