ಬೆಂಗಳೂರು : ‘ಪದ’ ಬೆಂಗಳೂರು ಆಯೋಜಿಸುವ ‘ಬಂಜೆಗೆರೆ ಜಯಪ್ರಕಾಶ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಅಭಿನಂದನಾ ಸಮಾರಂಭ’ವು ದಿನಾಂಕ 11 ಫೆಬ್ರವರಿ 2025ರ ಮಂಗಳವಾರ ಬೆಳಿಗ್ಗೆ ಘಂಟೆ 10.00ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಆರಂಭದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಶಂಕರ ಭಾರತೀಪುರ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಾಹಿತಿಗಳಾದ ಡಾ. ಕೆ. ಮರುಳಸಿದ್ದಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಾಹಿತಿಗಳಾದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಪ್ರೊ. ಎಲ್. ಎನ್. ಮುಕುಂದರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಡಾ. ಎಚ್. ಎಸ್. ರಾಘವೇಂದ್ರ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ಡಾಕ್ಟರ್ ಮಂಜುನಾಥ ಅದ್ದೆ ಹಾಗೂ ಡಾಕ್ಟರ್ ಸ್ವಾಮಿ ಆನಂದ್ ಆರ್. ಇವರು ‘ಬಂಜೆಗೆರೆಯವರ ಬದುಕು – ಒಡನಾಟ’, ಡಾಕ್ಟರ್ ತಾರೆಣಿ ಶುಭದಾಯಿನಿ ಇವರು ‘ಅನುವಾದಿತ ವೈಚಾರಿಕ ಕೃತಿಗಳು’, ವಿ. ಎಲ್. ನರಸಿಂಹಮೂರ್ತಿ ಇವರು ‘ಅನುವಾದಿತ ಕಾದಂಬರಿಗಳು’ ಹಾಗೂ ಮಹೇಶ್ ಹರವೆ ಇವರು ‘ಸಾಹಿತ್ಯ ವಿಮರ್ಶೆ’ಯ ಬಗ್ಗೆ ಮಾತನಾಡಲಿದ್ದು, ಪಂಕಜ ಈ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.
ಮಧ್ಯಾಹ್ನ ಗಂಟೆ 2.00ರಿಂದ ಅಗ್ರಹಾರ ಕೃಷ್ಣಮೂರ್ತಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎರಡನೇ ಗೋಷ್ಠಿಯಲ್ಲಿ ಡಾ. ರಾಜಪ್ಪ ದಳವಾಯಿ ಇವರು ಬಂಜೆಗೆರೆಯವರ ‘ಸಂಶೋಧನೆ’, ಡಾ. ವೈ. ಕೆ. ನಾರಾಯಣಸ್ವಾಮಿ ಇವರು ಸೃಜನಶೀಲ ಕಾವ್ಯ, ಡಾ. ರವಿಕುಮಾರ ಬಾಗಿ ಇವರು ‘ಸಂಸ್ಕೃತಿ ಚಿಂತನೆ’ ಹಾಗೂ ಡಾ. ಡಿ. ಆರ್. ದೇವರಾಜ್ ಇವರು ‘ಅನುವಾದಿತ ಕಾವ್ಯ’ದ ಬಗ್ಗೆ ಗೋಷ್ಠಿ ನಡೆಸಿಕೊಡಲಿದ್ದು, ಈ ಕಾರ್ಯಕ್ರಮವನ್ನು ರುದ್ರೇಶ ಅದರಂಗಿ ನಿರ್ವಹಿಸಲಿದ್ದಾರೆ.
ಗೋಷ್ಠಿಯ ಬಳಿಕ ಲೇಖಕರೊಂದಿಗೆ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ಮಂಟೇದ, ಹುಲಿಕಂಟೆ ಮೂರ್ತಿ, ತಾ. ತಿ. ಹೆಚ್ ಲವಕುಮಾರ್ ರೇಣುಕಾರಾಧ್ಯ ಪವಿತ್ರ ಎಸ್ ಮಂಜುನಾಥ ಎಸ್ ಕಿರಣ್ ಕುಮಾರಿ ಹಾಗೂ ಕರಿಸ್ವಾಮಿ ಭಾಗವಹಿಸಲಿದ್ದಾರೆ.
ಸಂಜೆ ಘಂಟೆ 5.30ರಿಂದ ಸಾಹಿತಿಗಳಾದ ಪ್ರೊ ಎಸ್ ಜಿ ಸಿದ್ದರಾಮಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಾಹಿತಿಗಳಾದ ಸಿದ್ದನಗೌಡ ಪಾಟೀಲ ಸಮಾರೋಪ ದೃಢೀಕರಣ ಆಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುದ್ರಾ ಅಂಕ ಇಲಾಖೆಯ ಆಯುಕ್ತರಾದ ಕೆ. ಎ. ದಯಾನಂದ ಭಾ. ಆ. ಸೇ. ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಯಪ್ರಕಾಶ್ ದಂಪತಿಗಳನ್ನು ಅಭಿನಂದಿಸಲಾಗುವುದು.