ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ಮತ್ತು ಕುವೆಂಪು ವಿ.ವಿ. ಕನ್ನಡ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ ‘ಜಾನಪದ ದಿಕ್ಕು-ದೆಸೆ’ ವಿಚಾರವಾಗಿ ಒಂದು ದಿನದ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ದಿನಾಂಕ 28-05-2024ರಂದು ಮಂಗಳವಾರ ಬೆಳಿಗ್ಗೆ 10-00ರಿಂದ ಸಂಜೆಯವರೆಗೆ ಏರ್ಪಡಿಸಲಾಗಿದೆ.
ಸಹ್ಯಾದ್ರಿ ವಿಜ್ಞಾನ ಕಾಲೇಜು ಆವರಣದಲ್ಲಿರುವ ಡಾ. ರಾಧಾಕೃಷ್ಣ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕುವೆಂಪು ವಿ.ವಿ. ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿಗಳು, ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಹಿ.ಶಿ. ಬೋರಲಿಂಗಯ್ಯ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್. ರಾಜೇಶ್ವರಿ, ಕನ್ನಡ ಅಧ್ಯಾಪಕರ ವೇದಿಕೆಯ ಅಧ್ಯಕ್ಷರಾದ ಡಾ. ಸಬಿತಾ ಬನ್ನಾಡಿಯವರು ಭಾಗವಹಿಸಲಿದ್ದಾರೆ.
ಮೊದಲ ಗೋಷ್ಠಿಯಲ್ಲಿ ಮಂಗಳೂರಿನ ಡಾ. ವಿಶ್ವನಾಥ ಬದಿಕಾನೆ ಇವರು ‘ಜಾನಪದ ಸ್ವರೂಪ ಮತ್ತು ಮಹತ್ವ’ ವಿಚಾರವಾಗಿ ಮತ್ತು ಬೆಂಗಳೂರಿನ ಡಾ. ಮೊಗಳ್ಳಿ ಗಣೇಶ್ ಇವರು ‘ಜಾನಪದ ಹೊಸ ಆಯಾಮಗಳು’ ವಿಚಾರವಾಗಿ ಮಾತನಾಡಲಿದ್ದಾರೆ. ಡಾ. ಜಿ.ಆರ್. ಲವ ಸಮನ್ವಯಕಾರರಾಗಿರುತ್ತಾರೆ. ಗೋಷ್ಠಿ 2ರಲ್ಲಿ ಬಳ್ಳಾರಿಯ ಡಾ. ಅರುಣ್ ಜೋಳದ ಕೂಡ್ಲಿಗಿ ಇವರು ‘ಜಾನಪದ ಅಧ್ಯಯನದ ಹೊಸ ಸಾಧ್ಯತೆಗಳು’ ವಿಚಾರವಾಗಿ ಮತ್ತು ಡಾ. ಎಸ್.ಎಂ. ಮುತ್ತಯ್ಯ ಇವರು ‘ಜಾನಪದದ ಅನ್ವಯಿಕತೆಯ ಸಾಧ್ಯತೆಗಳು’ ವಿಚಾರವಾಗಿ ಮಾತನಾಡಲಿದ್ದಾರೆ. ಡಾ. ಜಿ.ಕೆ. ಪ್ರೇಮಾ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂವಾದ, ಸಮಾರೋಪ, ಪ್ರಮಾಣ ಪತ್ರ ವಿತರಣೆ ನಡೆಯಲಿದೆ.
ಅಧ್ಯಯನ ಶಿಬಿರದಲ್ಲಿ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು, ಹೋಬಳಿ ಪದಾಧಿಕಾರಿಗಳು, ದ್ವಿತೀಯ ಬಿ.ಎ. ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ತರಗತಿಗಳ ಕನ್ನಡ ಐಚ್ಛಿಕ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಆಸಕ್ತರು ಹೆಸರು, ವಿಳಾಸ, ಕಾಲೇಜು ಹೆಸರು, ದೂರವಾಣಿ ಸಂಖ್ಯೆ ಜೊತೆಯಲ್ಲಿ ನೋಂದಾಯಿಸಿಕೊಳ್ಳಲು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷರು ಮನವಿ ಮಾಡಿದ್ದಾರೆ. ದೂರವಾಣಿ ಸಂಖ್ಯೆ 9449552795, ಡಾ. ಎಸ್.ಎಂ. ಮುತ್ತಯ್ಯ, ಡಾ. ಮೋಹನ್ ಚಂದ್ರಗುತ್ತಿ, ಡಾ. ಜಿ.ಆರ್. ಲವ, ಡಾ. ಜಿ.ಕೆ. ಪ್ರೇಮಾ ಇವರಲ್ಲಿ ಹೆಸರು ನೋಂದಾಯಿಸಲು ಡಿ. ಮಂಜುನಾಥ ಕೋರಿದ್ದಾರೆ.