ಮಂಗಳೂರು : ಕನ್ನಡ ಸಂಘರ್ಷ ಸಮಿತಿಯು ಖ್ಯಾತ ವೈದ್ಯೆ, ಹೆಸರಾಂತ ಕಥೆಗಾರ್ತಿಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಹುಟ್ಟುಹಬ್ಬದ ಅಂಗವಾಗಿ ಉದಯೋನ್ಮಖ ಕಥೆಗಾರ್ತಿಯರಿಗೆ ಮಹಿಳಾ ಕಥಾ ಸ್ಪರ್ಧೆ ಆಯೋಜಿಸಿದೆ. ಇದುವರೆಗೂ ಒಂದೂ ಕಥಾ ಸಂಕಲನ ಪ್ರಕಟಿಸದೆ ಇರುವವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಥೆಯು ಸ್ವಂತ ರಚನೆಯಾಗಿದ್ದು, ಮಹಿಳಾ ಕೇಂದ್ರಿತ ಕಥಾವಸ್ತು ಆಗಿರಬೇಕು. ಸ್ಪರ್ಧೆಗೆ ಕಳುಹಿಸುವ ಕಥೆಯು ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು. 1200 ಪದಗಳನ್ನು ಮೀರದ, ಅಥವಾ ಎ4 ಅಳತೆಯ ಕಾಗದದಲ್ಲಿ 5 ಪುಟಗಳು ಮೀರದಂತೆ ಹಾಳೆಯ ಒಂದೇ ಮಗ್ಗುಲಲ್ಲಿ ಕನ್ನಡದಲ್ಲಿ ಕೈಯಲ್ಲಿ ಬರೆದಿರಬಹುದು ಅಥವಾ ಡಿಟಿಪಿ ಮಾಡಿಸಿರಬಹುದು. ರೂ.200/-ಗಳ ಪ್ರವೇಶ ಶುಲ್ಕದೊಡನೆ (ಪ್ರವೇಶ ಶುಲ್ಕ ರೂ.200/-ಗಳನ್ನು ‘ಕನ್ನಡ ಸಂಘರ್ಷ ಸಮಿತಿ, ಉಳಿತಾಯ ಖಾತೆ ಸಂಖ್ಯೆ: 200300011051, IFSC CODE: HDFC0CSRCBL, ಬ್ಯಾಂಕ್: ಶ್ರೀರಾಮ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮಲ್ಲೇಶ್ವರಂ’ ಖಾತೆಗೆ ಜಮಾ ಮಾಡಬಹುದಾಗಿದೆ) ದಿನಾಂಕ 30-04-2024ರೊಳಗೆ ತಲುವಂತೆ ಕಳುಹಿಕೊಡಬೇಕು. ತಡವಾಗಿ ಬಂದ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಕಥೆಯನ್ನು ‘ಎ.ಎಸ್. ನಾಗರಾಜಸ್ವಾಮಿ, ಅಧ್ಯಕ್ಷ, ಕನ್ನಡ ಸಂಘರ್ಷ ಸಮಿತ, ನಂ.3, 1ನೇ ತಿರುವು, 1ನೇ ಮುಖ್ಯ ರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಬೆಂಗಳೂರು-560 056’ ಈ ವಿಳಾಸಕ್ಕೆ ಕಳುಹಿಸಿಕೊಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9739001410ಕ್ಕೆ ಸಂಪರ್ಕಿಸಬಹುದು.
ಸ್ಪರ್ಧಿಯು ಪ್ರತ್ಯೇಕ ಹಾಳೆಯಲ್ಲಿ ಒಂದು ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಿ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಡನೆ “ಇದುವರೆಗೆ ನನ್ನ ಒಂದೂ ಕಥಾಸಂಕಲನ ಪ್ರಕಟವಾಗಿರುವುದಿಲ್ಲ, ಕಥೆಯು ನನ್ನ ಸ್ವಂತ ರಚನೆಯಾಗಿದ್ದು, ಅನುವಾದವಾಗಲಿ ಅಥವಾ ಬೇರೆ ಕಥೆಯ ನಕಲಾಗಲಿ ಅಲ್ಲ” ಎಂಬ ಸ್ವಯಂ ಘೋಷಣೆಗೆ ಸಹಿ ಮಾಡಿ, ಕಥೆಯ ಜೊತೆ ಕಳುಹಿಸಬೇಕು.
ಪ್ರಥಮ ರೂ.2,500/, ದ್ವಿತೀಯ ರೂ.2,000/- ಹಾಗೂ ತೃತೀಯ ರೂ.1,500/- ಬಹುಮಾನ ನೀಡಲಾಗುವುದು. ಸಮಿತಿಯು ನೇಮಿಸುವ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ತಾವು ಕಳುಹಿಸುವ ಕಥೆಗಳನ್ನು ವಾಪಸ್ ಕಳುಹಿಸಲಾಗುವುದಿಲ್ಲ. ಸಮಿತಿ ಈ ವಿಚಾರದಲ್ಲಿ ಯಾವುದೇ ಪತ್ರ ವ್ಯವಹಾರ ಮಾಡುವುದಿಲ್ಲ.