ದಾವಣಗೆರೆ : ದಾವಣಗೆರೆ ಲಿಟರರಿ ಫೋರಂ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಕಥಾ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಲಾಗಿದೆ. ಕತೆಯು 3,000 ಪದಗಳ ಮಿತಿಯಲ್ಲಿರಬೇಕು. ಕತೆ ಸ್ವಂತದ್ದಾಗಿದ್ದು, ಕಳುಹಿಸುವವರ ಪರಿಚಯ, ಭಾವಚಿತ್ರ ಹಾಗೂ ವಿಳಾಸ ಪ್ರತ್ಯೇಕ ಪುಟದಲ್ಲಿರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಯ್ಕೆಯಾದ ಒಟ್ಟು 3 ಬಹುಮಾನಿತ ಕತೆಗಳಿಗೆ ತಲಾ ರೂಪಾಯಿ 5,000 ನಗದು ಬಹುಮಾನ ನೀಡಲಾಗುವುದು. ಬಹುಮಾನಿತ 3 ಕತೆಗಳು ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗುವ 10 ಕತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತದೆ.
ಕಥೆ ಕಳುಹಿಸಲು 31 ಡಿಸೆಂಬರ್ 2024 ಕೊನೆಯ ದಿನವಾಗಿದೆ. ಕತೆ ಕಳುಹಿಸಲು ವಯೋಮಿತಿ ಇಲ್ಲ. ಒಬ್ಬರು ಒಂದೇ ಕತೆಯನ್ನು ಇ-ಮೇಲ್ ಮೂಲಕ ಮಾತ್ರ ಕಳುಹಿಸಬೇಕು. ಇ-ಮೇಲ್: [email protected]