ಧಾರವಾಡ : ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ವತಿಯಿಂದ 2023ನೆಯ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ರೂ.20,000/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ.
ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕನ್ನಡದ ಹಿರಿಯ-ಕಿರಿಯ ಲೇಖಕರೆಲ್ಲ ಭಾಗವಹಿಸಬಹುದು. ಅಪ್ರಕಟಿತ ಕಥೆಗಳು ಮತ್ತು ನಿಯತಕಾಲಿಕಗಳು, ವಿಶೇಷಾಂಕಗಳಲ್ಲಿ ಪ್ರಕಟವಾದ ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾಗದಿರುವ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಸ್ಪರ್ಧಿಗಳು ಕಡ್ಡಾಯವಾಗಿ 12 ಫಾಂಟು ಸೈಟಿನಲ್ಲಿ, A4 ಅಳತೆಯ ಕಾಗದದಲ್ಲಿ, 80-120 ಪುಟಗಳಿಗೆ ಮೀರದಂತೆ ಟೈಪು ಮಾಡಿ, ಬೈಂಡು ಮಾಡಲಾದ ಕಥೆಗಳ ಮೂರು ಪ್ರತಿಗಳನ್ನು ದಿನಾಂಕ 12-11-2023ರೊಳಗೆ ನಮ್ಮ ವಿಳಾಸಕ್ಕೆ ಕಳಿಸಬೇಕು. ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ, ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ವೇದಿಕೆಯ ಸಂಚಾಲಕರನ್ನು ಸಂಪರ್ಕಿಸಿ. ಶ್ರೀ ವಿಕಾಸ ಹೊಸಮನಿ, ಸಂಚಾಲಕರು, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, 2ನೆಯ ಕ್ರಾಸ್, 2ನೆಯ ಮೇನ್, ದಾನೇಶ್ವರಿ ನಗರ, ಹಾವೇರಿ -581110. ಮೊಬೈಲ್ – 9110687473