ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಎಸ್.ಎಮ್.ಎಸ್. ಪದವಿಪೂರ್ವ ಕಾಲೇಜು, ಬ್ರಹ್ಮಾವರ ಇದರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಆಯೋಜಿಸುವ “ನುಡಿಚಿತ್ತಾರ” ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆಯು ದಿನಾಂಕ 09 ನವೆಂಬರ್ 2025ರ ಅದಿತ್ಯವಾರದಂದು ಬ್ರಹ್ಮಾವರದ ಎಸ್. ಎಮ್. ಎಸ್. ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ವಿಜೇತರಿಗೆ – ಪ್ರಥಮ ಬಹುಮಾನ 3000, ದ್ವಿತೀಯ ಬಹುಮಾನ – 2000, ತೃತೀಯ ಬಹುಮಾನ 1000 ನೀಡಿ ಗೌರವಿಸಲಾಗುವುದು. ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 20 ಅಕ್ಟೋಬರ್ 2025
ಸ್ಪರ್ಧೆಯ ನಿಯಮ ನಿಬಂಧನೆಗಳು :
• ಸ್ಪರ್ಧೆ ಎರಡು ಸುತ್ತಿನಲ್ಲಿ ನಡೆಯುತ್ತದೆ.
• ಮೊದಲ ಸುತ್ತು:- ನಿಮ್ಮ ಪ್ರಸ್ತುತಿಯನ್ನು ವಿಡಿಯೋ ಮಾಡಿ ಕಳಿಸಬೇಕು. ಇದರಲ್ಲಿ ಅತ್ಯುತ್ತಮ 25 ಪ್ರಸ್ತುತಿಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಗುವುದು.
• ಕಥಾ ವೀಡಿಯೋ ಯಾವುದೇ ಎಡಿಟ್ ಇಲ್ಲದಿರಲಿ.
• ಎರಡನೇ ಸುತ್ತು:-ಆಯ್ಕೆಯಾದ 25 ಸ್ಪರ್ಧಿಗಳು ನವೆಂಬರ್ 9 ರಂದು ಬ್ರಹ್ಮಾವರದಲ್ಲಿ ನಡೆಯುವ ‘ನುಡಿ ಚಿತ್ತಾರ-2025’ ಕಾರ್ಯಕ್ರಮದಲ್ಲಿ ತಮ್ಮ ಅದೇ ಕಥಾ ಪ್ರಸ್ತುತಿಯನ್ನು ಖುದ್ದು ಭಾಗವಹಿಸಿ ಪ್ರದರ್ಶಿಸತಕ್ಕದು.
• 8 ರಿಂದ 14 ವರ್ಷದೊಳಗಿನ ಮಕ್ಕಳಿಗೆ ವೈಯಕ್ತಿಕ ವಿಭಾಗ ಮಾತ್ರ
• ಕಡ್ಡಾಯವಾಗಿ ಕನ್ನಡದಲ್ಲಿ ಕಥೆ ಹೇಳತಕ್ಕದ್ದು
• ಸಮಯ ಮಿತಿ ಗರಿಷ್ಠ 5 ನಿಮಿಷ
• ಕಥೆಯ ಆಯ್ಕೆ, ಸ್ಪಷ್ಟತೆ, ಪ್ರಸ್ತುತಿ ಹಾಗೂ ಒಟ್ಟು ಪರಿಣಾಮ ಇವು ಮುಖ್ಯವಾಗಿ ಪರಿಗಣಿಸಲ್ಪಡುವ ಅಂಶಗಳು.
• ತೀರ್ಪುಗಾರರ ತೀರ್ಮಾನವೇ ಆರತಿಮ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ -9972117300, 9481253585 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

