ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಯುವ ಸಾಹಿತಿಗಳಿಗಾಗಿ ಸಾಹಿತಿ, ಕವಿ ದಿವಂಗತ ಮೇಟಿ ಮುದಿಯಪ್ಪ ನೆನಪಿನ ಜಿಲ್ಲಾಮಟ್ಟದ ‘ಯುವ ಕಥಾ ಸ್ಪರ್ಧೆ-2024’ಯನ್ನು ಆಯೋಜಿಸಲಾಗಿದೆ.
ಸ್ಪರ್ಧಾಳು ಕೇವಲ ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಕಥೆಯು ಕನಿಷ್ಟ ಒಂದು ಸಾವಿರದಿಂದ ಗರಿಷ್ಟ ಒಂದು ಸಾವಿರದ ಐನೂರು ಪದಗಳಿಗೆ ಮೀರಿರಬಾರದು. 18 ರಿಂದ 35 ವಯೋಮಿತಿಯ ಉಡುಪಿ ಜಿಲ್ಲೆಯ ಯುವಕ ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಯಾವುದೇ ಪ್ರಕಾರದ ಕಥೆಗಳಿಗೆ ಅವಕಾಶವಿದೆ. ಸ್ಪರ್ಧಿಯು ಕಳುಹಿಸುವ ಕಥೆಯು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಿರಬಾರದು ಹಾಗೂ ಪ್ರಕಟಣೆಗೊಂಡಿರಬಾರದು. ಕಥೆ ಕಳುಹಿಸಲು ಕೊನೆಯ ದಿನಾಂಕ 30-03-2024. ಸ್ಪರ್ಧೆಯ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಿಗೆ ನಗದು ಬಹುಮಾನ ತಲಾ ರೂ.5000/- ಹಾಗೂ 3000/- ದ ಜೊತೆಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ನೀಡಲಾಗುವುದು. ಮೂರು ಮೆಚ್ಚುಗೆ ಪಡೆದ ಕಥೆಗಳಿಗೆ ಪ್ರಶಸ್ತಿ ಪತ್ರದ ಜೊತೆ ಮೇಟಿ ಮುದಿಯಪ್ಪರ ಕೃತಿ ಸೇರಿ ಮೂರು ಪುಸ್ತಕಗಳ ಬಹುಮಾನ ನೀಡಲಾಗುವುದು.
ಕಥೆಯು ಸ್ವರಚಿತವಾಗಿದ್ದು, ಡಿ.ಟಿ.ಪಿ. ಮಾಡಿದ ಎರಡು ಪ್ರತಿಗಳನ್ನು ಜನಾರ್ದನ ಕೊಡವೂರು, ಗೌರವ ಕಾರ್ಯದರ್ಶಿಗಳು, ಭಾಮಾ, ಉಡುಪ ಲೇನ್, ಕೆನರಾ ಬ್ಯಾಂಕ್ ಹತ್ತಿರ, ಕೊಡವೂರು ಅಂಚೆ, ಕ್ರೋಡಾಶ್ರಮ, ಉಡುಪಿ ಜಿಲ್ಲೆ – 576106 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗಾಗಿ ರವಿರಾಜ್ ಎಚ್.ಪಿ. ಅಧ್ಯಕ್ಷರು, ಕ.ಸಾ.ಪ. ಉಡುಪಿ ತಾಲೂಕು ಘಟಕ – 98452 40309 ಇವರನ್ನು ಸಂಪರ್ಕಿಸಬಹುದು.