ಬಂಟ್ವಾಳ : ಏರ್ಯ ಆಳ್ವ ಫೌಂಡೇಶನ್’ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ‘ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ’ದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಮಿನಿಕಥೆ’ ರಚನಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆ ಆಯೋಜಿಸಲಾಗಿದೆ. ‘ಮಿನಿಕಥೆ’ 100 ಪದಗಳ ಒಳಗಿನ ಸ್ವರಚಿತ ಕಥೆಯಾಗಿರಬೇಕು. ಕವನ ಸ್ಪರ್ಧೆಯು ಮೂರು ವಿಭಾಗದಲ್ಲಿ ನಡೆಯಲಿದ್ದು, ಪ್ರಾಥಮಿಕ ವಿಭಾಗದಲ್ಲಿ ‘ಬಾಲ್ಯ’ , ಪ್ರೌಢ ವಿಭಾಗದಲ್ಲಿ ‘ಪ್ರಕೃತಿ’ ಹಾಗೂ ಕಾಲೇಜು ವಿಭಾಗದಲ್ಲಿ ಭಾಗವಹಿಸುವ ಸ್ಪರ್ಧಿಗಳು ‘ಕಾಮನ ಬಿಲ್ಲು’ ವಿಷಯದಲ್ಲಿ ಕವನಗಳನ್ನು ರಚಿಸಿ ದಿನಾಂಕ 24 ಜುಲೈ 2025ರ ಒಳಗಾಗಿ ಶ್ರೀ ದಾಮೋದರ ಮಸ್ತರ್ ಏರ್ಯ ಇವರ ಮೊಬೈಲ್ – 9449645537 ಸಂಖ್ಯೆಗೆ ವಾಟ್ಸ್ಆಪ್ ಸಂದೇಶ ಮುಖಾಂತರ ಕಳುಹಿಸಿಕೊಡಬಹುದು.