ಬಂಟ್ವಾಳ : ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳ ‘ಸಾಹಿತ್ಯ ಸಾಂಸ್ಕೃತಿಕ ಕಮ್ಮಟ’ ಏರ್ಯ ಬೀಡುವಿನಲ್ಲಿ ದಿನಾಂಕ 27 ಜುಲೈ 2025ರಂದು ನಡೆಯಿತು.
ಏರ್ಯ ಬಾಲಕೃಷ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿ.ಸು. ಭಟ್, ಅಮ್ಮಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ್‌ಕುಮಾರ್, ಕಲಾವಿದ ಸದಾಶಿವ ಡಿ. ತುಂಬೆ, ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಶಿಕ್ಷಕ ಜಯರಾಮ ಪಡ್ರೆ ಉಪಸ್ಥಿತರಿದ್ದರು.
ಕೇಶವ ಎಚ್. ಕಟೀಲು ಸ್ವಾಗತಿಸಿ, ಏರ್ಯರ ನೆನಪುಗಳನ್ನು ಮೆಲುಕು ಹಾಕಿದರು. ನಲ್ಕೆಮಾರು ಶಾಲೆಯ ಶಿಕ್ಷಕ ಜಗನ್ನಾಥ ವಂದಿಸಿದರು. ಕಾರ್ಯಕ್ರಮ ಸಂಯೋಜಕ ದಾಮೋದರ್ ಮಾಸ್ತರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಬಲೇಶ್ವರ ಹೆಬ್ಬಾರ್ ‘ಓದುವ ಹವ್ಯಾಸ’, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ‘ಚಿತ್ರ ಕಮ್ಮಟ’, ಶಿಕ್ಷಕ ವಿಠಲ ನಾಯಕ್ ‘ಮಕ್ಕಳ ಗೀತ ಸಾಹಿತ್ಯ’ ನಡೆಸಿಕೊಟ್ಟರು. ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಿತು.