ನೋಯ್ಡ : ಉತ್ತರ ಭಾರತದ ಅಮಿಟಿ ವಿಶ್ವವಿದ್ಯಾನಿಲಯ ನೋಯ್ಡದಲ್ಲಿ ದಿನಾಂಕ 03 ಮಾರ್ಚ್ 2025ರಿಂದ 07 ಮಾರ್ಚ್ 2025ರವರೆಗೆ ನಡೆದ 38ನೇ ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಅಂತರ್ ವಿ.ವಿ. ರಾಷ್ಟ್ರೀಯ ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಹಿಂದು ವಿದ್ಯಾದಾಯಿನಿ ಸಂಘ (ರಿ.) ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ಮಂಗಳೂರು ವಿ.ವಿ.ಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಪ್ರಹಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ನಿರ್ಮಿಕಾ ಎನ್. ಸುವರ್ಣ, ಭರತ್, ಜಿತಿನ್ ಜೆ. ಶೆಟ್ಟಿ, ಚಿರಾಗ್, ಜ್ಞಾನೇಶ್ ಎಲ್. ಶೆಟ್ಟಿ, ವೈಭವಿ, ಹಿತಾ ಉಮೇಶ್ ಇವರು ಭಾಗವಹಿಸಿದ್ದರು. ಹಿಮಾಂಗಿ ಡಿ. ಉಳ್ಳಾಲ್ ತಬ್ಲಾ ಸೋಲೋ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತಗಳಲ್ಲಿ ನಿರಂತರವಾಗಿ ಅಭೂತ ಪೂರ್ವ ದಾಖಲೆಗಳನ್ನು ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸುತ್ತಿದ್ದು, ಅನೇಕ ಪ್ರತಿಷ್ಠಿತ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.