Subscribe to Updates

    Get the latest creative news from FooBar about art, design and business.

    What's Hot

    ‘ಭಾವ ಸ್ಮೃತಿ’ ಆತ್ಮಕಥನ ಕೃತಿಗೆ ಮೊಗೇರಿ ಸಮಷ್ಟಿ ಪುಸ್ತಕ ಪುರಸ್ಕಾರ

    August 25, 2025

    ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 5ನೇ ಕಾರ್ಯಕ್ರಮ

    August 25, 2025

    ಬಹುಮುಖ ಪ್ರತಿಭೆ ಕುಮಾರಿ ಶ್ರೇಯಾ ಹಿರೇಮಠ್ ರಂಗಪ್ರವೇಶ | ಆಗಸ್ಟ್ 30

    August 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗೋವಿಂದ ದಾಸ ಕಾಲೇಜಿನಲ್ಲಿ ವಿದ್ಯಾರ್ಥಿ ಸೆನೆಟ್ ಮತ್ತು ಲಲಿತಕಲಾ ಸಂಘದ ಉದ್ಘಾಟನೆ
    Cultural

    ಗೋವಿಂದ ದಾಸ ಕಾಲೇಜಿನಲ್ಲಿ ವಿದ್ಯಾರ್ಥಿ ಸೆನೆಟ್ ಮತ್ತು ಲಲಿತಕಲಾ ಸಂಘದ ಉದ್ಘಾಟನೆ

    September 21, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಹಿಂದೂ ವಿದ್ಯಾದಾಯಿನೀ ಸಂಘ (ರಿ) ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು ಸುರತ್ಕಲ್‌ನ ವಿದ್ಯಾರ್ಥಿ ಸೆನೆಟ್ ಮತ್ತು ಲಲಿತಕಲಾ ಸಂಘವು ದಿನಾಂಕ 20 ಸೆಪ್ಟೆಂಬರ್ 2024ರಂದು ಉದ್ಘಾಟನೆಗೊಂಡಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ರೋಟರಾಕ್ಟ್ ಸಮಿತಿ ಅಧ್ಯಕ್ಷೆ ರೋ. ಯಶೋಮತಿ ಮಾತನಾಡಿ “ದೇಶದ ಭವಿಷ್ಯದ ನಾಯಕರು ರೂಪುಗೊಳ್ಳುವುದರಲ್ಲಿ ವಿದ್ಯಾ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಚಟುವಟಿಕೆಗಳಲ್ಲಿ ಶ್ರದ್ಧೆ ಉತ್ಸಾಹಗಳಿಂದ ಭಾಗವಹಿಸುವ ಮೂಲಕ ತಮ್ಮೊಳಗಿನ ಸುಪ್ತ ಪ್ರತಿಭೆಗಳನ್ನು ಅನಾವರಣಗಳಿಸಬೇಕು. ಕಲಾ ಲೋಕದಲ್ಲಿ ಮಿನುಗುತ್ತಿರುವ ಅನೇಕ ಪ್ರತಿಭೆಗಳಿಗೆ ಕಾಲೇಜಿನ ವೇದಿಕೆ ಅವರ ಕಲಾ ಪ್ರಯಾಣಕ್ಕೆ ಮೊದಲ ವೇದಿಕೆಯಾಗಿದ್ದು ಗೋವಿಂದ ದಾಸ ಕಾಲೇಜಿನ ಲಲಿತಕಲಾ ಸಂಘವು ಅನೇಕ ಪ್ರತಿಭಾವಂತ ಕಲಾವಿದರನ್ನು ಕಲಾರಂಗಕ್ಕೆ ನೀಡುತ್ತಿರುವುದು ಶ್ಲಾಘನೀಯ” ಎಂದು ನುಡಿದರು.

    “ಯುವ ಜೀವನದ ಪ್ರತಿಯೊಂದು ಹೆಜ್ಚೆಯು ಮುಂದಿನ ಬದುಕಿಗೆ ಮಹತ್ವದ್ದಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಎಲ್ಲಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ” ಎಂದು ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ನುಡಿದರು.

    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವನ್ನು ಮೂಡಿಸಿ ನಾಯಕತ್ವದ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸೆನೆಟ್‌ ರೂಪಿತಗೊಂಡಿದೆ. ವಿದ್ಯಾರ್ಥಿ ಸೆನೆಟ್‌ನ ಪ್ರತಿನಿಧಿಗಳು ಶಿಸ್ತು, ವಿನಯ, ಆದರ್ಶ ಹಾಗೂ ಆತ್ಮವಿಶ್ವಾಸದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ಮಾದರಿ ನಾಯಕರಾಗಿ ಬೆಳೆಯಬೇಕು. ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಕಾಲೇಜು ಸಮಾನ ಅವಕಾಶಗಳನ್ನು ಮತ್ತು ವೇದಿಕೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ” ಎಂದರು.

    ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ. ವಿದ್ಯಾರ್ಥಿ ಸೆನೆಟ್‌ನ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಸೆನೆಟ್‌ನ ಕಾರ್ಯದರ್ಶಿಗಳಾದ ತುಷಾರ್ ಸ್ವಾಗತಿಸಿ, ಯಶಸ್ ಕೆ. ಬಂಗೇರ ವಂದಿಸಿ, ಪೂರ್ವಿಕಾ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ., ಲಲಿತಕಲಾ ಸಂಘದ ಸಂಯೋಜಕರಾದ ಡಾ. ವಿಜಯಲಕ್ಷ್ಮೀ, ಡಾ. ಸಂತೋಷ್ ಆಳ್ವ, ಸಜಿತಾ ಕೆ. ನಾಯರ್, ತರಬೇತುದಾರ ವಿನೋದ್ ಶೆಟ್ಟ್ಟಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಧನ್ವಿನ್, ಜಿತಿನ್‌ ಎನ್. ಶೆಟ್ಟಿ, ಗಗನ್‌ ಎನ್. ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ವೇದಿಕಾ, ಸ್ವಾತಿ, ಪ್ರತೀಕ್ಷಾ ಎ. ಭಟ್, ಶಿವಾನಿ ಮತ್ತು ಲಲಿತಕಲಾ ಸಂಘದ ಕಾರ್ಯದರ್ಶಿಗಳಾದ ಹಿತ ಉಮೇಶ್, ವೈಶಾಖ್, ನಿರ್ಮಿಕಾ, ಮನೀಶ್ ಡಿ. ಶೆಟ್ಟಿ, ಭರತ್ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಎಂ.ಜಿ. ಹೆಗಡೆಯವರ ಆತ್ಮಕಥೆ ‘ಚಿಮಣಿ ಬೆಳಕಿನಿಂದ’ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಸೆಪ್ಟೆಂಬರ್ 22
    Next Article ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ‘ಸ್ವರ ಕುಡ್ಲ ಸೀಸನ್- 6’ ಸಂಗೀತ ಸ್ಪರ್ಧೆ
    roovari

    Comments are closed.

    Related Posts

    ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ‘ಚಿಣ್ಣರ ಉತ್ಸವ’ | ಆಗಸ್ಟ್ 22

    August 21, 2025

    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಮೂರು ದಿನಗಳ ಭಜನೆ, ಹರಿಸಂಕೀರ್ತನೆ, ಗಮಕ ಮತ್ತು ಹವ್ಯಾಸಿ ತಂಡಗಳ ತಾಳಮದ್ದಳೆ

    August 20, 2025

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಸಂಸ್ಕೃತಿ ಜಾತ್ರೆ’ | ಆಗಸ್ಟ್ 21

    August 19, 2025

    ಕಲಾಂಗಣ್ ನಲ್ಲಿ ‘ಕೊಂಕಣಿ ಮಾನ್ಯತಾ ದಿನಾಚರಣೆ -2025’ | ಆಗಸ್ಟ್ 20

    August 18, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.