ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ “ಲಂಕೇಶ್ ಬಹುತ್ವಗಳ ಶೋಧ : ಅಧ್ಯಯನ ಶಿಬಿರ’ವು ದಿನಾಂಕ 11 ನವೆಂಬರ್ 2024ರಿಂದ 13 ನವೆಂಬರ್ 2024ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ, ಕಲಾಗ್ರಾಮ, ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ.
ದಿನಾಂಕ 11 ನವೆಂಬರ್ 2024ರಂದು ಈ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಲ್.ಎನ್. ಮುಕುಂದರಾಜ್ ಇವರ ಅಧ್ಯಕ್ಷತೆಯಲ್ಲಿ ಖ್ಯಾತ ವಕೀಲರಾದ ಸಿ.ಹೆಚ್. ಹನುಮಂತರಾಯ ಇವರು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 12-00 ಗಂಟೆ ನಡೆಯಲಿರುವ ಗೋಷ್ಠಿ 1ರಲ್ಲಿ ದಶಮುಖ ಲಂಕೇಶ್ ‘ಲಕೇಶರ ಬದುಕು ಬರಹ’ – ಅಗ್ರಹಾರ ಕೃಷ್ಣಮೂರ್ತಿ, ಗೋಷ್ಠಿ 2ರಲ್ಲಿ ಲಂಕೇಶರ ಕಾವ್ಯ ‘ನನ್ನವ್ವ ಫಲವತ್ತಾದ ಕಪ್ಪು ನೆಲ’ – ಡಾ. ಎಂ.ಎಸ್. ಆಶಾದೇವಿ, ಗೋಷ್ಠಿ 3ರಲ್ಲಿ ಲಂಕೇಶರ ಕಾದಂಬರಿಗಳು ‘ಮುಸ್ಸಂಜೆಯ ಪ್ರಸಂಗಗಳಲ್ಲಿ’ – ಡಾ. ಅಮರೇಶ ನುಗಡೋಣಿ ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ 4ರಲ್ಲಿ ಸಂವಾದ – ಶಿಬಿರದ ನಿರ್ದೇಶಕರು ಹಾಗೂ ವಿದ್ವಾಂಸರೊಂದಿಗೆ ಗುಂಪು ಚರ್ಚೆ, ಸಂಜೆ 6-00 ಗಂಟೆಗೆ ಬಿ. ಚಂದ್ರೇಗೌಡ ಮತ್ತು ಶೂದ್ರ ಶ್ರೀನಿವಾಸ ಇವರಿಂದ ಸಾರ್ವಜನಿಕ ಉಪನ್ಯಾಸ ನಡೆಯಲಿದೆ.
ದಿನಾಂಕ 12 ನವೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಗೋಷ್ಠಿ 5ರಲ್ಲಿ ಕಲ್ಲು ಕರಗುವ ಸಮಯ ‘ಸಣ್ಣ ಕತೆಗಳು’ – ಡಾ. ನಟರಾಜ್ ಹುಳಿಯಾರ್, ಗೋಷ್ಠಿ 6ರಲ್ಲಿ ಎಲ್ಲಿದ್ದೆ ಇಲ್ಲಿತಂಕ ‘ಸಾಂಗತ್ಯದ ನೆನಪುಗಳು’ – ಎನ್.ಎಸ್. ಶಂಕರ್, ಪ್ರತಿಭಾ ನಂದಕುಮಾರ್, ಸುಬ್ಬು ಹೊಲೆಯಾರ್, ಬಸವರಾಜ ಮೇಗಲಗೇರಿ, ಎಂ.ಎಸ್. ಮೂರ್ತಿ ಮತ್ತು ಮೂಡಲಗಿರಿಯಪ್ಪ (ಗಿರಿ), ಗೋಷ್ಠಿ 7ರಲ್ಲಿ ಹೊಸತಿನ ದಾರಿ ಸಿನಿಮಾ : ಕೃಷ್ಣ ಮಾಸಡಿ ಮತ್ತು ಪತ್ರಿಕೋದ್ಯಮ : ಎನ್.ಆರ್. ವಿಶುಕುಮಾರ್, ಗೋಷ್ಠಿ 8ರಲ್ಲಿ ‘ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ನಾಟಕ : ಸಿ. ಬಸವಲಿಂಗಯ್ಯ ಮತ್ತು ಟೀಕೆ ಟಿಪ್ಪಣಿ : ದಿನೇಶ್ ಅಮೀನಮಟ್ಟು, ಸಂಜೆ 6-00 ಗಂಟೆಗೆ ಡಾ. ಸಿ.ಎಸ್. ದ್ವಾರಕನಾಥ್ ಮತ್ತು ಡಾ. ನಾಗತಿಹಳ್ಳಿ ಚಂದ್ರಶೇಖರ್ ಇವರಿಂದ ಸಾರ್ವಜನಿಕ ಉಪನ್ಯಾಸ ನಡೆಯಲಿದೆ.
ದಿನಾಂಕ 13 ನವೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಗೋಷ್ಠಿ 9ರಲ್ಲಿ ಅಲ್ಲಿಂದ ಇಲ್ಲಿಗೆ ‘ಲಂಕೇಶರ ಅನುವಾದ ಸಾಹಿತ್ಯ’ – ರಾಜೇಂದ್ರ ಪ್ರಸಾದ್, ಗೋಷ್ಠಿ 10ರಲ್ಲಿ ಲಂಕೇಶರಿಂದ ಪ್ರೇರಣೆ : ಕೆ. ಬಿ. ಮಹಾದೇವಪ್ಪ, ಅಕ್ಷತಾ ಹುಂಚದಕಟ್ಟೆ, ವಿ.ಎಂ. ಮಂಜುನಾಥ್, ಈ. ಬಸವರಾಜ್, ಡಾ. ಸುರೇಶ್ ನಾಗಲಮಡಿಕೆ, ಬಸವರಾಜ್ ಬಿ.ಸಿ. ಮತ್ತು ಮಂಜುಳಾ ಹುಲಿಕುಂಟೆ ಇವರುಗಳು ವಿಷಯ ಮಂಡನೆ ಮಾಡಲಿದ್ದು, ಮಧ್ಯಾಹ್ನ 4-00 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.