ಬಂಟ್ವಾಳ : ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ದಿ. ಬಂಟ್ವಾಳ ಜಯರಾಮ ಆಚಾರ್ಯ ಇವರ ಪ್ರಥಮ ವರ್ಷದ ಪುಣ್ಯತಿಥಿಯ ಅಂಗವಾಗಿ ಶ್ರೀ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ‘ಸುದರ್ಶನ ವಿಜಯ – ಭಾರ್ಗವ ವಿಜಯ’ ದಿನಾಂಕ 19 ಅಕ್ಟೋಬರ್ 2025ರ ಆದಿತ್ಯವಾರದಂದು ಅಪರಾಹ್ನ ಘಂಟೆ 2.00ರಿಂದ ಬಿ. ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ್ ಭಟ್ ಕಲ್ಲಡ್ಕ, ಡಾ. ಪ್ರಖ್ಯಾತ ಶೆಟ್ಟಿ ಅಳಕೆ. ಚಂಡೆ ಮದ್ದಾಳೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಿಕ್ ರಾವ್ ಪುತ್ತಿಗೆ, ಸತ್ಯಜೀತ್ ರಾವ್ ರಾಯಿ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಸದಾಶಿವ ಕುಲಾಲ್ ವೇಣೂರು, ದಿವಾಕರ ರೈ ಸಂಪಾಜೆ, ಶಶಿಧರ ಕುಲಾಲ್ ಕನ್ಯಾನ, ಪ್ರಸಾದ್ ಸವಣೂರು, ಸಂತೋಷ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ಗೌಡ ನೀರ್ಕೆರೆ, ಮುಖೇಶ್ ದೇವದರ್ ನಿಡ್ಲೆ, ಉಮೇಶ್ ಶೆಟ್ಟಿ ಉಬರಡ್ಕ, ಪುನೀತ್ ಬೋಳಿಯಾರ್, ಶಿವರಾಜ್ ಬಜಕೊಡ್ಲು, ರೂಪೇಶ್ ಆಚಾರ್ಯ, ಸಂದೇಶ್ ಬೆಳ್ಳೂರು ಭಾಗವಹಿಸಲಿದ್ದಾರೆ.

