ತುಮಕೂರು : ಯಕ್ಷಗಾನ ಸಾಂಸ್ಕೃತಿಕ ವೇದಿಕೆ ತುಮಕೂರು ಮತ್ತು ಶ್ರೀ ಕೃಷ್ಣ ಮಂದಿರ ತುಮಕೂರು ಇವರ ಸಹಯೋಗದಲ್ಲಿ ‘ಸುಧನ್ವ ಕಾಳಗ’ ಯಕ್ಷಗಾನ ಬಯಲಾಟವು ದಿನಾಂಕ 28-10-2023ರ ಶನಿವಾರ ಸಂಜೆ ಘಂಟೆ 4.30ಕ್ಕೆ ತುಮಕೂರಿನ ಶ್ರೀ ಕೃಷ್ಣ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಕರ್ನಾಟಕ ಯಕ್ಷಧಾಮ ಮಂಗಳೂರು ಇವರ ನೇತೃತ್ವದಲ್ಲಿ ಯಕ್ಷಗಾನದ ಅಗ್ರಗಣ್ಯ ಕಲಾವಿದರ ಕೂಡುವಿಕೆಯಲ್ಲಿ ಪ್ರಸ್ತುತಪಡಿಸುವ ಈ ಯಕ್ಷಗಾನ ಪೌರಾಣಿಕ ಪ್ರಸಂಗದ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಸರ್ವಶ್ರೀಗಳಾದ ಸುಬ್ರಾಯ ಹೆಬ್ಬಾರ, ಅಕ್ಷಯ ಕುಮಾರ, ಶ್ರೀನಿವಾಸ ಪ್ರಭು, ಪ್ರಸನ್ನ ಶೆಟ್ಟಿಗಾರ, ಶಶಿಕಾಂತ ಶೆಟ್ಟಿ, ಪ್ರಶಾಂತ ಹೆಗಡೆ, ಜನಾರ್ದನ ಹಂದೆ, ರಾಮಕೃಷ್ಣ ಭಟ್, ಅಂಬರೀಷ ಭಟ್ ಹಾಗೂ ಲಕ್ಷ್ಮೀ ಪ್ರಸಾದ ಭಾಗವಹಿಸಲಿದ್ದಾರೆ. ಕಲಾವಿದ , ಕವಿ, ಸಾಹಿತಿ, ಗಾಯಕ ಮತ್ತು ಸಂಘಟಕರಾದ ಹೆಚ್. ಜನಾರ್ದನ ಹಂದೆ ಮಂಗಳೂರು ಇವರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಯ.ಸಾಂ. ವೇದಿಕೆ ತುಮಕೂರಿನ ಪ್ರಧಾನ ಸಂಚಾಲಕರುಗಳಾದ ನಾಗರಾಜಧನ್ಯ.ಕೆ ಹಾಗೂ ಅನಂತರಾವ್.ಕೆ ಮತ್ತು ಸಂಚಾಲಕರುಗಳು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.