ಉಡುಪಿ : ‘ಹಂದೆ ಯಕ್ಷವೃಂದ ಕೋಟ’ ಆಯೋಜನೆಯಲ್ಲಿ ಹಲವು ಯಕ್ಷಗಾನ ಪ್ರಸಂಗಗಳ ಮುದ್ರಣ ದಾಖಲೆಯ ಶ್ರೀ ಪಾವಂಜೆ ಗುರುರಾಯರ 75 ನೇ ಪುಣ್ಯದಿನದ ಸಂಸ್ಮರಣದ ಅಂಗವಾಗಿ ದಿನಾಂಕ 23-09-2023 ರಂದು ಉಡುಪಿ ರಾತ್ರಿ ಘಂಟೆ 07.00ರಿಂದ ಶ್ರೀ ಮೂಲಿಕೆ ರಾಮಕೃಷ್ಣಯ್ಯ ವಿರಚಿತ ಯಕ್ಷಗಾನ ಬಯಲಾಟ ನಡೆಯಲಿರುವುದು.
ಮಂಗಳೂರಿನ ಜನಾರ್ದನ ಹಂದೆ ಇವರ ಸಂಯೋಜನೆಯಲ್ಲಿ ನಡೆಯಲಿರುವ ಈ ಯಕ್ಷಗಾನದ ಹಿಮ್ಮೇಳದಲ್ಲಿ ಸರ್ವಶ್ರೀಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಲಂಬೋದರ ಹೆಗಡೆ, ಕೆ.ಜೆ.ಸುಧೀಂದ್ರ, ಸುದೀಪ ಉರಾಳ. ಹಾಗೂ ಮುಮ್ಮೇಳದಲ್ಲಿ ಸರ್ವಶ್ರೀಗಳಾದ ಸಂಜೀವ ಹೆನ್ನಾಬೈಲ್, ಸುಜಯೀಂದ್ರ ಹಂದೆ, ರವಿ ಕೌಂಡ್ಲಿ, ರಾಘವೇಂದ್ರ ತುಂಗ, ಸ್ಫೂರ್ತಿ ಭಟ್, ಶ್ರೀನಾಥ ಉರಾಳ, ಸುಹಾಸ ಕರಬ, ವೆಂಕಟೇಶ ವೈದ್ಯ ಮತ್ತಿತರರು ಭಾಗವಹಿಸಲಿದ್ದಾರೆ.

