ಕುಂದಾಪುರ : “ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 107ನೇ ತಿಂಗಳ ಕಾರ್ಯಕ್ರಮ ದಿನಾಂಕ 25 ಮೇ 2025ರಂದು ನಡೆಯಿತು.
ಶ್ರೀಮತಿ ವಸಂತಿ ಆರ್. ಪಂಡಿತ್ ಮತ್ತು ಶ್ರೀಮತಿ ದೇವಕಿ ಸುರೇಶ್ ಪ್ರಭು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾಗಿ ಗೊಂಬೆಯಾಟ ಪ್ರೋತ್ಸಾಹಕರಾದ ರಾಧಾಕೃಷ್ಣ ಪ್ರಭು, ಮುಖ್ಯ ಅತಿಥಿಗಳಾಗಿ ಉಡುಪಿ ಯಕ್ಷಗಾನ ಕೇಂದ್ರದ ಗುರು ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಮಂಡಳಿಯ ಭಾಗವತರಾದ ಉಮೇಶ್ ಸುವರ್ಣ, ರಮೇಶ್ ಕಾಮತ್, ವಿ. ಶ್ರೀನಿವಾಸ ಪೈ, ಆಡಿಟರ್ ವಾಸುದೇವ ಶ್ಯಾನುಭಾಗ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2024-25ರ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಹಾಗೂ ಕಲಾವಿದೆ ಕುಮಾರಿ ಆಕಾಂಕ್ಷಾ ಎಸ್.ಪೈ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಆಕಾಂಕ್ಷಾ ಎಸ್. ಪೈ ಹಾಗೂ ಅವನಿ ಶ್ಯಾನುಭಾಗ್ ಇವರು ನಡೆಸಿಕೊಟ್ಟ ಸುಗಮ ಸಂಗೀತ ಎಲ್ಲರ ಮನ ರಂಜಿಸಿತು. ರಾಜೇಂದ್ರ ಪೈ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.