ಮಂಗಳೂರು : ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ.) ಇದರ ಆಶ್ರಯದಲ್ಲಿ ಉಳ್ಳಾಲದಲ್ಲಿ ಪ್ರಪ್ರಥಮ ಬಾರಿಗೆ ‘ಸುಗಿತ್ ನಲಿಪುಗ -2024’ ತ್ರಿವಳಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ದಿನಾಂಕ 19-05-2024ರಂದು ಬೆಳಗ್ಗೆ 10-00ರಿಂದ ತೊಕ್ಕೊಟ್ಟು ಅಂಬಿಕಾರೋಡು ಗಟ್ಟಿ ಸಮಾಜ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ತಂಡಗಳಿಂದ ನಗದು, ಮಾನ ಫಲಕ, ಪ್ರಶಂಸಾ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರೋತ್ಸಾಹ ಧನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು.